ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸವ
ಉಚ್ಚಿಲ : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಉಚ್ಚಿಲ ಹೆದ್ದಾರಿಯ ಡಿವೈಡರ್‌ನಲ್ಲಿ ವನಮಹೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ನೆರವೇರಿತು.
ಈ ಸಂದರ್ಭ ಉಚ್ಚಿಲ ರೋಟರಿಯ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಮಾತನಾಡಿ, ಅಂತರ್‌ರಾಷ್ಟ್ರೀಯ ಸಂಸ್ಥೆಯಾದ ರೋಟರಿ ಕ್ಲಬ್ ಉಚ್ಚಿಲದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದಿನ ದಿಗಳಲ್ಲಿ ಇನ್ನಷ್ಟು ಸಮಾಜ ಸೇವೆ ಮಾಡುವ ಯೋಜನೆ ನಮ್ಮದಾಗಿದೆ ಎಂದರು.
ಉಚ್ಚಿಲ ರೋಟರಿ ಕ್ಲಬ್ ಉಚ್ಚಿಲ ಇದರ ಅಧ್ಯಕ್ಷ ಇಬಾದುಲ್ಲ ರಫಿಕ್ ಅಹ್ಮದ್, ಕಾರ್ಯದರ್ಶಿ ಸತೀಶ್ ಕುಂಡಂತಾಯ, ನಿಕಟಪೂರ್ವ ಕಾರ್ಯದರ್ಶಿ ಅಚ್ಚುತ ಶೆಣೈ, ನಜ್ಮಾ ಇಬಾದುಲ್ಲ ಉಪಸ್ಥಿತರಿದ್ದರು.
