ಮುಂಡಾಲ ಯುವ ವೇದಿಕೆ ಮತ್ತು ಮಹಾದೇಶ್ವರ ಭಜನಾ ಮಂಡಳಿಯಿಂದ ರಕ್ಷಾಬಂಧನ ಕಾರ್ಯಕ್ರಮ
ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಮತ್ತು ಪಲಿಮಾರಿನ ಶ್ರೀ ಮಹಾದೇಶ್ವರ ಭಜನಾ ಮಂಡಳಿಯ ಸಹಯೋಗದಲ್ಲಿ ಸೋಮವಾರ ಶ್ರಾವಣ ಮಾಸದ ಹುಣ್ಣಿಮೆಯ ರಕ್ಷಾಬಂಧನ ಕಾರ್ಯಕ್ರಮ ದೀಪ ಪ್ರಜ್ವಲಿಸಿ ಭಜನಾ ಸಂಕೀರ್ತನೆಯೊಂದಿಗೆ ಆರಂಭದೊಂದಿಗೆ
ಪರಸ್ಪರ ರಕ್ಷಾಬಂಧನ ಕಟ್ಟಿ ಆಶೀರ್ವಾದಿಸಲಾಯಿತು.
ಮಹಾದೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಸುಧಾಕರ ಕೆ. ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ರಕ್ಷಾಬಂಧನದ ಮಹತ್ವ ಮತ್ತು ಮುಂಡಾಲ ವೇದಿಕೆಯ ಹಿನ್ನಲೆ ಹಾಗೂ ಭವಿಷ್ಯದ ಸಂಘಟನೆಯ ಬಗ್ಗೆ ಸಂತೋಷ್ ನಂಬಿಯಾರ್ ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ಪ ಸಾಲ್ಯಾನ್ ವಹಿಸಿದ್ದರು.
ಈ ಸಂಧರ್ಭದಲ್ಲಿ ಮಹಿಳಾ ಮಂಡಳಿಯ ಪುಷ್ಪ, ಸವಿತಾ, ಪ್ರಮುಖರಾದ ಭಾಸ್ಕರ್ ಪಲಿಮಾರು, ಶ್ರೀಧರ್ ಪಲಿಮಾರು, ಮಂಜುನಾಥ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು.
ಪ್ರಸನ್ನ ಪಡುಬಿದ್ರಿ ಪ್ರಾಸ್ತಾವನೆಗೈದರು. ಕಾರ್ಯದರ್ಶಿ ಸುರೇಶ್ ಪಡುಬಿದ್ರಿ ನಿರೂಪಿಸಿದರು.
