ಕಲಿಮಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಉಡುಪಿ : ರಾಜ್ಯಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂಪನ್ನ
Thumbnail
ಉಡುಪಿ : ಕಲಿಮಾ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಬೆಂಗಳೂರಿನ ಬಿ. ಬಿ.ಎಂ. ಪಿ ಮೈದಾನ ಜಯಂತಿನಗರ ಹೊರಮಾವು ಎಂಬಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯಮಟ್ಟದ ಬ್ರಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ ಡಿ, ಕೆ ಗೋಪಾಲ್ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಕಲಿಮಾ ಫೌಂಡೇಶನ್ ಹಾಗೂ ಚಾರಿಟೇಬಲ್ ಅಧ್ಯಕ್ಷರು ಡಾ.ತಿಗ್ಬತ್ ಉಲ್ಲಾ ಶರೀಫ್ ರವರರು ವಹಿಸಿದ್ದರು. ವೇದಿಕೆಯಲ್ಲಿ ಮಹಿಳಾ ಅಧ್ಯಕ್ಷರಾದ ಮಹಾಲಕ್ಷ್ಮಿ,ಕೃಷ್ಣ ಮೂರ್ತಿ, ಡಾ.ಪಿ, ಕೆ ಶ್ರೀ ವಾಸ್ತವ್, ಡಾ.ಅಖಿಲ್ ಮನೋಜ್, ಡಾ. ಅಂಜನಾ ಕೆ. ವಿ, ಡಾ.ಅಜ್ಮ್ ಅನ್ಸರ್, ಡಾ.ನಮೀರಾ ಶೈಕ್, ಡಾ.ದರ್ಶನ್, ಟ್ರಸ್ಟ್ ನ ಬೆಂಗಳೂರು ಸಂಯೋಜಕರಾದ ದಿವ್ಯ ಸರಸ್ವತಿ, ಹಾಗೂ ಚೆನ್ನಮ್ಮ, ಟ್ರಸ್ಟ್ ನ ಸದಸ್ಯರಾದ ನಾಗೇಂದ್ರ ಶಾನುಬಾಗ್, ರವಿಕಿರಣ್, ಸಿಂದ್ಯಾ ಡಿಸೋಜ,, ಹಸೀನಾ ಫರ್ ಹಾನ ಹಾಗೂ ಹೊರ ಮಾವು ಅರೋಗ್ಯ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು. ಸುಮಾರು 450 ಜನರು ಶಿಬಿರದ ಸದುಪಯೋಗ ಪಡೆದುಕೊಂಡರು. ಡಾ.ವಿಜಯ್ ಕುಮಾರ್ ಹಳ್ಳಿರವರು ಸ್ವಾಗತಿಸಿ, ಟ್ರಸ್ಟ್ ನ ಕಾರ್ಯದರ್ಶಿ ದಿವಾಕರ ಡಿ. ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Additional image Additional image
20 Aug 2024, 10:45 AM
Category: Kaup
Tags: