ಪಡುಬಿದ್ರಿ : ಮುಂಡಾಲ ಯುವ ವೇದಿಕೆ ಮತ್ತು ಗಜಾನನ ಭಜನಾ ಮಂದಿರ - ರಕ್ಷಾಬಂಧನ ಕಾರ್ಯಕ್ರಮ
ಪಡುಬಿದ್ರಿ : ಬೊಗ್ಗರಿಲಚ್ಚಿಲ್ ನ ಗಜಾನನ ಭಜನಾ ಮಂದಿರ ಮತ್ತು ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ವತಿಯಿಂದ ಮಂಗಳವಾರ ರಕ್ಷಾಬಂಧನ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಮಾಜಿ ತಾ.ಪಂ ಸದಸ್ಯರು, ಗಜಾನನ ಭಜನಾ ಮಂದಿರದ ಅಧ್ಯಕ್ಷರಾದ ಭಾಸ್ಕರ್ ಪಡುಬಿದ್ರಿ ದೀಪ ಪ್ರಜ್ವಲಿಸಿ ಶುಭಹಾರೈಸಿದರು.
ಏಳು ಮಾಗಣೆಯ ಅಧ್ಯಕ್ಷರಾದ ಸದಾನಂದ ಬೊಗ್ಗರಿಲಚ್ಚಿಲ್, ಸಂತೋಷ್ ನಂಬಿಯಾರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ಪ ಸಾಲ್ಯಾನ್ ವಹಿಸಿದ್ದರು.
ರಮೇಶ್, ಮನೋಹರ್, ಸವಿತಾ, ಮಂಜುಳಾ ಅಶೋಕ್, ದೀಪಾ, ನಿತೀನ್ ಸಾಲ್ಯಾನ್, ಮಂಜುನಾಥ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಸನ್ನ ಪಡುಬಿದ್ರಿ ಪ್ರಸ್ತಾವನೆಗೈದರು.
ಸುರೇಶ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.
