ಬಂಟಕಲ್ಲು ಆಟೋ ರಿಕ್ಷಾ ಚಾಲಕ, ಮಾಲಕರ ಸಂಘದಿಂದ ಕ್ರೀಡಾ ಪರಿಕರಗಳ ವಿತರಣೆ
Thumbnail
ಶಿರ್ವ : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.) ಬಂಟಕಲ್ಲು ಇದರ ವತಿಯಿಂದ ಶ್ರೀ ದುರ್ಗಾಪರಮೇಶ್ವರಿ ಪ್ರಾಥಮಿಕ ಶಾಲೆ ಬಂಟಕಲ್ಲು ಇದರ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳ ವಿತರಣೆ ಕಾರ್ಯಕ್ರಮ ನಡೆಯಿತು. ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ಗೌರವಾಧ್ಯಕ್ಷರಾದ ಮಾಧವ ಕಾಮತ್ ರವರು ಶಾಲೆಯ ಮುಖ್ಯಸ್ಥರಾದ ಜಯರಾಮ ಪ್ರಭು ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ, ಕಾರ್ಯದರ್ಶಿ ಡೆನಿಸ್ ಡಿಸೋಜ, ಸದಸ್ಯರಾದ ಸುರೇಶ್ ಕಲ್ಲು ಗುಡ್ಡೆ, ಹರೀಶ್, ರಮೇಶ್ ಹಾಗು ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಸಂಗೀತ ಪಾಟ್ಕರ್ ರವರು ಕಾರ್ಯಕ್ರಮ ನಿರೂಪಿದರು.
22 Aug 2024, 06:24 PM
Category: Kaup
Tags: