ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆಗೆ ಧಾಳಿ ತಪ್ಪು : ಡೇವಿಡ್ ಡಿಸೋಜ ಮುದರಂಗಡಿ
Thumbnail
ಮುದರಂಗಡಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಮನೆ ಮೇಲಿನ ಧಾಳಿಗೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ‌‌ ಅಧ್ಯಕ್ಷ, ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್ ‌ರವರು‌ ಖೇದ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ‌ಹಕ್ಕು ಸಹಜ ಆದರೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣವು ಅತ್ಯಂತ ಹೇಯ ಕೃತ್ಯವಾಗಿದೆ. ಈ ಕೃತ್ಯದ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ‌ ಸೂಕ್ತ ವಿಚಾರಣೆ ನಡೆಸಿ‌ ಕ್ರಮ ಕೈಗೊಳ್ಳುವಂತೆ ಡೇವಿಡ್ ಡಿಸೋಜ ಪೋಲಿಸ್ ಇಲಾಖೆಯನ್ನು ‌ಒತ್ತಾಯಿಸಿದ್ದಾರೆ.
22 Aug 2024, 07:03 PM
Category: Kaup
Tags: