ಪಡುಬಿದ್ರಿ ರೋಟರಿ ಕ್ಲಬ್ ಗೆ 11 ಜಿಲ್ಲಾ ಪ್ರಶಸ್ತಿಗಳು
Thumbnail
ಶಿವಮೊಗ್ಗ : ಇಲ್ಲಿನ ಕೂಸ್ಮ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆದ‌ ರೋಟರಿ ಕ್ಲಬ್ ಇದರ 2023-24 ರ ಸಾಲಿನ ಪ್ರಗತಿ ಜಿಲ್ಲಾ ಅರ್ವಾಡ್ ನೃೆಟ್ ಕಾರ್ಯಕ್ರಮದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಗೆ 11 ಜಿಲ್ಲಾ ಪ್ರಶಸ್ತಿ ಲಭಿಸಿದೆ. ನಿಯೋಜಿತ ಜಿಲ್ಲಾ ಗರ್ವನರ್ ಬಿ.ಎಮ್ ಭಟ್, ನಿಕಟ ಪೂರ್ವ ಜಿಲ್ಲಾ ಗರ್ವನರ್ ಬಿ.ಸಿ ಗೀತಾ, ಜಿಲ್ಲಾ ಕಾರ್ಯದರ್ಶಿ ಡಾ. ಪ್ರೀತಿ ಮೋಹನ್, ಅವಾರ್ಡ್ ಚೇರ್ಮನ್ ಡಾ. ಜಯ ಗೌರಿ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಪೂರ್ವ ಸಹಾಯಕ ಗರ್ವನರ್ ಗಳಾದ ಶೃೆಲೇಂದ್ರ ರಾವ್, ವೃೆ. ಸುಧೀರ್ ಕುಮಾರ್, ಪೂರ್ವ ಅಧ್ಯಕ್ಷರಾದ ಪಿ. ಕೃಷ್ಣ ಬಂಗೇರ, ಗೀತಾ ಅರುಣ್, ಗಣೇಶ್ ಆಚಾರ್ಯ ಎರ್ಮಾಳು, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ಕಾರ್ಯದರ್ಶಿ ಹೇಮಲತಾ ಸುವರ್ಣ, ಸದಸ್ಯರಾದ ಶೋಭಾ ಚಂದ್ರಶೇಖರ್, ಆರತಿ ಘೋರೃೆ ಉಪಸ್ಥಿತರಿದ್ದರು.
Additional image Additional image
24 Aug 2024, 10:58 PM
Category: Kaup
Tags: