ಕಾಪು : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹರ್ದ ಕೋ-ಆಪರೇಟಿವ್ ಸೊಸೈಟಿ - ವೃದ್ಧಾಶ್ರಮ ಭೇಟಿ ; ಅಗತ್ಯ ವಸ್ತುಗಳ ವಿತರಣೆ
Thumbnail
ಕಾಪು : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹರ್ದ ಕೋ-ಆಪರೇಟಿವ್ ಸೊಸೈಟಿ ಲಿ. ಇದರ ಮೂಡುಬೆಳ್ಳೆ ಹಾಗು ಕಾಪು ಶಾಖೆಯ ವತಿಯಿಂದ ಅಗಸ್ಟ್ 24 ರಂದು 78 ನೇ ಸ್ವಾತಂತ್ಯೋತ್ಸವದ ಪ್ರಯುಕ್ತ ವಿಶ್ವಾಸದ ಮನೆ ಕರುಣಾಯಲ ವೃದ್ಧಾಶ್ರಮಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭ ಸುಮಾರು 185 ಬೆಡ್‌ಶೀಟ್ ಮತ್ತು ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಶಿರ್ವ ಠಾಣಾಧಿಕಾರಿ ಶಕ್ತಿವೇಲು, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಜಾಜ್೯ ಜೆರಾಲ್ಡ್ ಫೆರ್ನಾಂಡಿಸ್, ವಿಶ್ವಾಸದ ಮನೆ ಕರುಣಾಯಲ ವೃದ್ಧಾಶ್ರಮದ ಮೇಲ್ವಿಚಾರಕರಾದ ಮ್ಯಾಥಿವ್, ಮೂಡುಬೆಳ್ಳೆ ಶಾಖೆಯ ವ್ಯವಸ್ಥಾಪಕರಾದ ಪ್ರೀತಿ ಚಿಪ್ಕ್ ರ್ ಹಾಗು ಕಾಪು ಶಾಖೆಯ ವ್ಯವಸ್ಥಾಪಕರಾದ ರೋಹನ್ ಪಿಂಟೋ ಉಪಸ್ಥಿತರಿದ್ದರು. ವೃದ್ಧಾಶ್ರಮದ ಸಿಬ್ಬಂದಿಗಳು, ಕಾಪು ಹಾಗು ಮೂಡುಬೆಳ್ಳೆಯ ಸಿಬ್ಬಂದಿಗಳು ಸಹಕರಿಸಿದರು. ಕಲ್ಯಾಣಪುರ ಶಾಖಾ ವ್ಯವಸ್ಥಾಪಕರಾದ ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.
Additional image Additional image
24 Aug 2024, 11:47 PM
Category: Kaup
Tags: