ಶಿರ್ವ : ರೋಟರಿ ಕ್ಲಬ್, ಇನ್ನರ್ ವಿಲ್ ಶಂಕರಪುರ - ಶಾಲಾ ಇಂಟರಾಕ್ಟ್ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಸ್ಪರ್ಧೆ ಸಂಪನ್ನ
ಶಿರ್ವ : ರೋಟರಿ ಕ್ಲಬ್ ಶಂಕರಪುರ ಮತ್ತು ಇನ್ನರ್ ವಿಲ್ ಶಂಕರಪುರ ಇವರ ಜಂಟಿ ಆಶ್ರಯದಲ್ಲಿ ಇನ್ನಂಜೆ ಮತ್ತು ಶಂಕರಪುರ ಶಾಲಾ ಇಂಟರಾಕ್ಟ್ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ದಿ. ಸಾವ್ಯಾ ಸಬೀನಾ ಡೆಸಾ ಇವರ ಸ್ಮರಣಾರ್ಥ ಫ್ರಾನ್ಸಿಸ್ ಡೆಸಾ ಮತ್ತು ಅಗ್ನೆಸ್ ಡೆಸಾ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆಗ್ನೆಸ್ ಡೆಸಾ ಇವರು ನೆರವೇರಿಸಿದರು.
ರೋಟರಿ ಜಿಲ್ಲೆ 3182 ರ ಇಂಟರಾಕ್ಟ್ ಜಿಲ್ಲಾ ಸಭಾಪತಿಯಾದ ಕೃಷ್ಣ ಕಾಂಚನ್ ಮತ್ತು ರೋಟರಿ ಜಿಲ್ಲೆ ವಲಯ 5 ಸಹಾಯಕ ಗವರ್ನರ್ ಆದ ಅನಿಲ್ ಡೆಸಾ ಶಂಕರಪುರ, ಯೂತ್ ಸರ್ವಿಸ್ ಡೈರೆಕ್ಟರ್ ಜೇಸನ್ ಡಿ ಸೋಜಾ, ರೋಟರಿ ಮತ್ತು ಇನ್ನರ್ ವಿಲ್ ಕಾರ್ಯದರ್ಶಿಗಳಾದ ಅನಿಲ್ದಾ ನೋರೋನ್ನಾ ಮತ್ತು ಮೇಬಲ್ ಮಾರ್ಟೀಸ್ ಉಪಸ್ಥಿತರಿದ್ದರು.
ಇಂಟ್ರಾಕ್ಟ್ ಮಕ್ಕಳಿಗಾಗಿ ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆ, ಜನಪದ ಶೈಲಿಯ ನೃತ್ಯ, ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಂಕರಪುರದ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಮತ್ತು ಇನ್ನರ್ ವಿಲ್ ಅಧ್ಯಕ್ಷರಾದ ಸಮೀರಾ ರೆಬೆಲ್ಲೋ ವಹಿಸಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಗಣೇಶ್ ಎಲ್ಲೂರು ಮತ್ತು ಚಿನ್ಮಯ್ ಭಟ್ ಸಹಕರಿಸಿದ್ದರು. ರಸಪ್ರಶ್ನೆ ಸ್ಪರ್ಧೆಯನ್ನು ಒಲಿವರ್ ರೆಬೆಲ್ಲೋ ಮತ್ತು ಕಾರ್ಯಕ್ರಮವನ್ನು ಫ್ಲಾವಿಯ ಮೆನೇಜಸ್ ನಿರೂಪಿಸಿದರು.
