ಶ್ರೀ ಕೃಷ್ಣ ‌ಜನ್ಮಾಷ್ಟಮಿ : ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಟಮಿಗೆ ಅವತಾರ್ 2 ವೇಷ
Thumbnail
ಕಟಪಾಡಿ : ಶ್ರೀ ಕೃಷ್ಣ ‌ಜನ್ಮಾಷ್ಟಮಿ ಊರೆಲ್ಲಾ ಸಂಭ್ರಮದಿಂದಿರಲು‌ ಕಟಪಾಡಿಯ ರವಿಯವರು ಈ ಬಾರಿಯೂ ವೇಷ ಹಾಕಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಚಿಕಿತ್ಸೆಗೆ ತನ್ನಿಂದಾದ ಸಹಾಯದ ಬೆಂಬಲ ನೀಡಲಿದ್ದಾರೆ. ಇದಕ್ಕಾಗಿ ಅವರು ಈ ಬಾರಿ ಆಯ್ಕೆ ಮಾಡಿದ ವೇಷ ಅವತಾರ್ 2. ಇವರೊಂದಿಗೆ‌ ಆಶಿಕ್ ಎಂಬ ಯುವಕ ವೇಷ ಧರಿಸಿದ್ದು, ವಿಶೇಷವಾಗಿದೆ. ರವಿ ಕಟಪಾಡಿ ಈ ಬಾರಿ ಶಾಲಾ ಮಕ್ಕಳಿಗೆ ಮನರಂಜನೆ ನೀಡುವ ಇಂಗಿತ ವ್ಯಕ್ತಪಡಿಸಿದ್ದು, ಸೋಮವಾರ ಕಟಪಾಡಿ, ಶಂಕರಪುರ, ಉದ್ಯಾವರ ಶಾಲೆಗಳಿಗೆ ಭೇಟಿ ನೀಡಿ ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲು ತಂಡದೊಂದಿಗೆ ತೆರಳಿದರು. ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ.ವೈದ್ಯಕೀಯ ವೆಚ್ಚಸಹಾಯ ಹಸ್ತ ನೀಡಿ ವೆಚ್ಚ ಭರಿಸಿದಾಗಿ ಹೇಳಿದರು. ದಿನೇಶ್ ಮಟ್ಟುರವರು ಇವರ ಅವತಾರ್‌ಗೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.
Additional image Additional image
27 Aug 2024, 07:39 AM
Category: Kaup
Tags: