ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಂತಾವರ ಕುಲಾಲ ಸಂಘಟನೆಯಿಂದ ಧನಸಹಾಯ
Thumbnail
ಕಾಪು : ಪುಣೆಯಲ್ಲಿ ವಾಸವಿರುವ ಕಾರ್ಕಳ ತಾಲೂಕಿನ ಬೇಲಾಡಿಯ ಬಾಬು‌ ಮೂಲ್ಯರ ಸಹೋದರಿ ಸುಮಲತಾ ಮೂಲ್ಯ ತೀವ್ರ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ನರಳಿ ಸಾಲ- ಸೋಲ ಮಾಡಿ ಲಕ್ಷಗಟ್ಟಲೆ ಹಣವನ್ನು ಆಸ್ಪತ್ರೆಗೆ ಕಟ್ಟಬೇಕಾಗಿ ಬಂತು. ಕಡುಬಡತನದಿಂದ ದಿನಗೂಲಿ ಮಾಡಿ ಜೀವನ ನೆಡೆಸುತ್ತಿದ್ದ ಕಷ್ಟದ ಬದುಕು ಸುಮಲತಾರದ್ದು. ಕೈ ಹಿಡಿದ ಗಂಡ ಅಗಲಿ ವರ್ಷ ಹಲವಾಗಿದೆ. ಒಬ್ಬಳು ಮಗಳ ಜೊತೆ ಬದುಕು ಸವೆಸುತ್ತಿದ್ದ ಅವರಿಗೆ ಡೆಂಗ್ಯೂ ವಕ್ಕರಿಸಿ ಚಿತ್ರ ಹಿಂಸೆ ನೀಡಿತು. ಈ ಸಂದರ್ಭ ಅವರ ನೆರವಿಗೆ ಧಾವಿಸಿ ಬಂದದ್ದು ಸಜ್ಜನ ದಾನಿಗಳು. ಕಾಪು ಕುಲಾಲ ಯುವ ವೇದಿಕೆ ಮತ್ತು ಕಾಂತಾವರ ಕುಲಾಲ ಸಂಘಟನೆಯ ಸಹಭಾಗಿತ್ವದಲ್ಲಿ ಒಟ್ಟಾದ ರೂ.35,200 ಹಣವನ್ನು ಅವರ ಮಡಿಲಿಗೆ ಹಾಕಿ ನೆರವಿನ ಹಾರೈಕೆಯನ್ನು ಅವರಿಗೆ ನೀಡಲಾಯ್ತು. ಈ ಸಂದರ್ಭ ಕುಲಾಲ ಸುಧಾರಕ ಸಂಘ ಪುಣೆ ಇದರ ಅಧ್ಯಕ್ಷರಾದ ದೊಡ್ಡಣ್ಣ ಸಿ ಮೂಲ್ಯ, ಕಾಪು ಕುಲಾಲ ಯುವವೇದಿಕೆಯ ಉದಯ ಕುಲಾಲ್ ಕಳತ್ತೂರು, ಕಾಂತಾವರ ಕುಲಾಲ ಸಂಘಟನೆಯ ಸಂತೋಷ್ ಕುಲಾಲ್ ಬೇಲಾಡಿ, ಪುಣೆ ಪಿಂಪ್ರಿ ಚಿಂಚಿವಾಡ್ ಕುಲಾಲ ಸಂಘಟನೆಯ (PCMC(R))ಸದಸ್ಯ ಉಮೇಶ್ ಮೂಲ್ಯ ಆಕ್ರೋಡಿ ಉಪಸ್ಥಿತರಿದ್ದರು. ಈ ಮಾತೃಹೃದಯಿ ನೊಂದಜೀವಕ್ಕೆ ಮುಂದಕ್ಕೆ ನೆರವಿನ ಧಾರೆ ಹರಿಸುವವರು ಸುಮಲತಾ ಕುಲಾಲ್ ಅವರ ಬ್ಯಾಂಕ್ ಖಾತೆಗೆ ಅಥವಾ ಗೂಗಲ್ ಪೇ ನಂಬರ್ ಗೆ ಹಣ ವರ್ಗಾವಣೆ ಮಾಡಬಹುದು. BANK DETAILS: BANK NAME : JANATHA SAHAKARI BANK BHAVANI PETH NAME :SUMALATHA YOGISH A/C NUMBER : 003220100021915 IFSC CODE :JSBP0000003 GPAY NUMBER, CONTACT NUMBER :7709407409
27 Aug 2024, 09:59 AM
Category: Kaup
Tags: