ಫ್ರೆಂಡ್ಸ್ ಗ್ರೂಪ್ ಕಳತ್ತೂರು : 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಸಂಪನ್ನ
ಕಾಪು : ಫ್ರೆಂಡ್ಸ್ ಗ್ರೂಪ್ ಕಳತ್ತೂರು ಇವರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ 3ನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ಭಾನುವಾರ ಕುಶಲಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂ ಇಲ್ಲಿ ಜರಗಿತು.
ಕಳತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ದಿವಾಕರ ಶೆಟ್ಟಿ ಕಳತ್ತೂರು, ಅಶೋಕ್ ರಾವ್, ಪ್ರದೀಪ್ ರಾವ್, ಶಾರದೇಶ್ವರಿ ಗುರ್ಮೆ, ಅನಿತ ಉಪಾಧ್ಯಾಯ, ಫ್ರೆಂಡ್ಸ್ ಗ್ರೂಪ್ ಗೌರವಾಧ್ಯಕ್ಷ ರಂಗನಾಥ ಶೆಟ್ಟಿ, ಅಧ್ಯಕ್ಷರಾದ ರೋಹಿತ್ ರಾವ್, ಫ್ರೆಂಡ್ಸ್ ಗ್ರೂಪ್ ಸದಸ್ಯರು
ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೀರ್ತನ್, ಶ್ರೇಯಾ, ಕುಮಾರಿ ಸುರಕ್ಷ ಸಹಕರಿಸಿದ್ದರು.
ಸುನೀತ ರಂಗನಾಥ್ ಸ್ವಾಗತಿಸಿದರು. ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ವಂದಿಸಿದರು.
ವಿಜೇತರಿಗೆ ಬಹುಮಾನವನ್ನು ವಿತರಿಸಿ, ಸ್ಪರ್ಧಿಸಿದ ಎಲ್ಲಾ ಮಕ್ಕಳಿಗೆ ಗೌರವ ಸ್ಮರಣಿಕೆ ನೀಡಲಾಯಿತು.
