ಕಟಪಾಡಿ : ವಿನಯ್ ಬಲ್ಲಾಳ್ ನಿಧನ
ಕಟಪಾಡಿ : ಇಲ್ಲಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಕಟಪಾಡಿ ಬೀಡು ಮನೆತನದ ವಿನಯ್ ಬಲ್ಲಾಳ್ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರ ಅಂತಿಮ ವಿಧಿ ವಿಧಾನ ಅವರ ಸ್ವಗೃಹ ಕಟಪಾಡಿಯ ಮೂಡಬೆಟ್ಟುವಿನಲ್ಲಿ ಬುಧವಾರ
ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
