ಅದಮಾರುವಿನಲ್ಲಿ ಮೊಸರು ಕುಡಿಕೆ ಉತ್ಸವ
Thumbnail
ಅದಮಾರು : ಮೂಲ ಮಠದ ಆಯೋಜನೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವದ ಅಂಗವಾಗಿ ಮೊಸರು ಕುಡಿಕೆ ಉತ್ಸವ ಮಂಗಳವಾರ ಅದಮಾರು ವೃತ್ತದಲ್ಲಿ ನೆರವೇರಿತು. ಸಣ್ಣ ರಥದಲ್ಲಿ ಕೃಷ್ಣನ ಮೂರ್ತಿ ಸಾಗಿ ಬಂದು ಅದಮಾರು ವೃತ್ತದಲ್ಲಿರುವ ಮಠದ ಜಾಗದಲ್ಲಿ ಕೃಷ್ಣನಿಗೆ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ತಪ್ಪಂಗಾಯಿ, ಮಡಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ ಸಹಿತ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಮಹಿಳಾ ಚೆಂಡೆ ವಾದನ ಮೆರವಣಿಗೆಯಲ್ಲಿ ಸಾಗಿ ಬಂದಿತು. ಮೊಸರು ಕುಡಿಕೆಯು ಜರಗಿತು. ಈ ಸಂದರ್ಭ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಹಿತ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
Additional image Additional image Additional image
27 Aug 2024, 10:55 PM
Category: Kaup
Tags: