ವಿಶ್ವ ಹಿಂದೂ ಪರಿಷತ್ ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ, ಸ್ಥಾಪನಾ ದಿನಾಚರಣೆ
Thumbnail
ಕಾಪು : ವಿಶ್ವ ಹಿಂದೂ ಪರಿಷತ್ ಮೂಡುಬೆಳ್ಳೆ ಘಟಕದ ವತಿಯಿಂದ ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಹಾಗೂ ಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಭಾನುವಾರ ನೆಲ್ಲಿಕಟ್ಟೆಯಲ್ಲಿ ನೆರವೇರಿತು. ವಿಶ್ವ ಹಿಂದೂ ಪರಿಷತ್ ವತಿಯಿಂದ ಪೋಸ್ಟ್ ಮ್ಯಾನ್ ರಮೇಶ್ ನಾಯ್ಕ್ ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆಯಲ್ಲಿ ರಾಮ ಜಾನಕಿ ಕಟ್ಟೆಯನ್ನು ನಿರ್ಮಿಸುವುದಾಗಿ ನಿರ್ಣಯಿಸಲಾಯಿತು. ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ವಿಹಿಂಪ ಕಾಪು ತಾಲೂಕು ಕಾರ್ಯದರ್ಶಿ ರಾಜೇಂದ್ರ ಶೆಣೈ, ಕಾಪು ತಾಲೂಕು ಬಜರಂಗದಳ ಸಂಚಾಲಕ್ ಆನಂದ್ ಶಿರ್ವ, ತಾಲೂಕು ಸಾಪ್ತಾಹಿಕ ಮಿಲನ್ ನೀರಜ್ ಪೂಜಾರಿ, ಕಾಪು ತಾಲೂಕು ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಬೆಳ್ಳೆ ಘಟಕದ ಮಾತೃಶಕ್ತಿ ಪ್ರಮುಖ್ ಅಶಾಶೆಟ್ಟಿ , ಕಾರ್ಯದರ್ಶಿ ಅಭಿಷೇಕ್ ಆಚಾರ್ಯ, ಸಂಚಾಲಕ್ ಮಿಥುನ್ ಪೂಜರಿ, ಗೋರಕ್ಷ ಪ್ರಮುಖ್ ಪವನ್ ಆಚಾರ್ಯ, ಗೌರವ ಸಲಹೆಗಾರರಾದ ನಾಗರಾಜ್ ಭಟ್ ಹಾಗೂ ಸಂಘಟನಾ ಪ್ರಮುಖರಾದ ದೀಪಕ್ ಮೂಡುಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.
Additional image Additional image
01 Sep 2024, 07:16 PM
Category: Kaup
Tags: