ಸೈಂಟ್ ಜೋನ್ಸ್ ಅಕಾಡೆಮಿ ಶಂಕರಪುರ : ಉಡುಪಿ ವಲಯ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಕೂಟ ಸಂಪನ್ನ
Thumbnail
ಶಿರ್ವ : ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾಧ್ಯಮ‌ ಪ್ರಾಥಮಿಕ ಶಾಲೆ ಶಂಕರಪುರದಲ್ಲಿ ಉಡುಪಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾಕೂಟವನ್ನು ಆಯೋಜಿಸಲಾಯಿತು. ಈ ಪಂದ್ಯಾಕೂಟದಲ್ಲಿ ಶಾಲಾ ಸಂಚಾಲಕರಾದ ರೆ| ಫಾ| ಡಾ| ಪ್ರಕಾಶ್ ಅನಿಲ್ ಕ್ಯಾಸ್ತೆಲಿನೊ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ರೆನ್ ಟ್ರೆವರ್ ಡಾಯಸ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವೀಂದ್ರ ನಾಯಕ್, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ, ಸೈಂಟ್ ಜಾನ್ ಎವಾಂಜೆಲಿಸ್ಟ್ ಚರ್ಚಿನ ಸಹಾಯಕ ಧರ್ಮಗುರುಗಳು ಹಾಗೂ ಚರ್ಚ್ ಪಾಲನಾ ಮಂಡಳಿಯ ಪದಾಧಿಕಾರಿಗಳು, ರಕ್ಷಕ ಶಿಕ್ಷಕ ಸಂಘ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಸರಿತಾ ಮೆಲ್ವಿಟಾ ಡಿಸೋಜರವರು ಉಪಸ್ಥಿತರಿದ್ದರು. ಒಟ್ಟು 15 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.
Additional image
01 Sep 2024, 07:30 PM
Category: Kaup
Tags: