ಉದ್ಯಮಿ ಪಡುಬಿದ್ರಿ ಅನಂತ್ ರಾಜ್ ಹುಟ್ಟು ಹಬ್ಬದ ನಿಮಿತ್ತ ಕೌಡೂರು ಹೊಸ ಬೆಳಕು ವೃದ್ಧಾಶ್ರಮಕ್ಕೆ ಪರಿಕರಗಳ ಹಸ್ತಾಂತರ
Thumbnail
ಪಡುಬಿದ್ರಿ : ಬೆಂಗಳೂರಿನ ಖ್ಯಾತ ಉದ್ಯಮಿ ರಾಜ್ ಅಸೋಸಿಯೇಟ್ಸ್ ಸಂಸ್ಥೆ ಅಡಳಿತ ನಿರ್ದೇಶಕ ಪಡುಬಿದ್ರಿ ಅನಂತ್ ರಾಜ್ ರವರ 75ನೇ ಹುಟ್ಟು ಹಬ್ಬದ ಸಲುವಾಗಿ ಅವರ ಸುಪುತ್ರಿ ಶ್ರುತಿ ಅನಂತ್ ರಾಜ್ ರವರು ರೂ. 51,320 ಮೌಲ್ಯದ ಪರಿಕರಗಳನ್ನು ಕೌಡೂರಿನ ಹೊಸ ಬೆಳಕು ವೃದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭ ಪಡುಬಿದ್ರಿ ಬಾಲಪ್ಪ ಗುರಿಕಾರ ನಟರಾಜ್ ರಾವ್ ರವರು 7 ಕಾಟ್ ,7 ಬೆಡ್ 7 ದಿಂಬುಗಳನ್ನು ವೃದ್ಧಾಶ್ರಮಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್, ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಹೊಸ ಬೆಳಕು ಸಂಸ್ಥೆಯ ಆಡಳಿತ ನಿರ್ದೇಶಕಿ ತನುಲಾ ಉಪಸ್ಥಿತರಿದ್ದರು.
04 Sep 2024, 07:04 PM
Category: Kaup
Tags: