ಅದಮಾರು ಮಠದ ಹಿರಿಯ ಸ್ವಾಮೀಜಿಗೆ ಜೈ ತುಲುನಾಡ್ ಸಂಘಟನೆಯಿಂದ ಮನವಿ
Thumbnail
ಕಾಪು : ಜೈ ತುಲುನಾಡ್ (ರಿ.) ಸಂಘಟನೆಯ ವತಿಯಿಂದ ಉಡುಪಿಯ ಅದಮಾರು ಮಠದ ಸ್ವಾಮೀಜಿಗೆ ಅದಮಾರು ಮಠದ ಅಧೀನ ದೇವಸ್ಥಾನ, ಶಿಕ್ಷಣ ಸಂಸ್ಥೆ ಶಾಖಾಮಠದಲ್ಲಿ ತುಳುನಾಡಿನ ಮಣ್ಣಿನ ಭಾಷೆಯಾದ ತುಲುಲಿಪಿಯಲ್ಲಿ ನಾಮ ಫಲಕ ಅಳವಡಿಸಲು ಹಾಗೂ ಅಧೀನ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಉಚಿತವಾಗಿ ತುಲು ಲಿಪಿಯನ್ನು ಕಲಿಸಲು ಸಹಕಾರ ಇದರ ಬಗ್ಗೆ ಮನವಿಯನ್ನು ನೀಡಲಾಯಿತು. ಜೈ ತುಲುನಾಡ್ (ರಿ.) ಸಂಘದ 10ನೇ ವರ್ಷದ ಸಂಭ್ರಮಾಚರಣೆಯ ಹೊಸ್ತಿಲಲ್ಲಿದ್ದು ಸಂಘದ 10 ವರ್ಷದ ಕಾರ್ಯವೈಖರಿಯ ಬಗ್ಗೆ ತಿಳಿಸಲಾಯಿತು. ಹಿರಿಯ ಸ್ವಾಮಿಗಳು ಯಾವುದೇ ಒಂದು ಫಲಾಪೇಕ್ಷೆ ಇಲ್ಲದೇ ತುಲುಭಾಷೆಯ,ಲಿಪಿಯ ಉಳಿವಿಗಾಗಿ ಶ್ರಮಿಸುತ್ತಿರುವ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಜೈ ತುಲು ನಾಡ್ (ರಿ.) ಇದರ ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿಯಾದ ಪ್ರಜ್ಞಾಶ್ರೀ ಎಂ. ಕೊಡವೂರ್, ಸಂಘಟನಾ ಕಾರ್ಯದರ್ಶಿಯಾದ ಸಂತೋಷ್.ಎನ್.ಎಸ್ ಕಟಪಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಾಗರ್ ಬನ್ನಂಜೆ, ಸದಸ್ಯರಾದ ಕಿನ್ನು ಒಡಿಪು, ಸುಪ್ರಿಯಾ ಕೊಡವೂರ್, ಶಿವಪ್ರಸಾದ್ ಮಣಿಪಾಲ್, ಅಂಬಿಕಾ ಕನ್ನರ್ಪಾಡಿ, ಯೋಗಿನಿ ಕೊರಂಗ್ರಪಾಡಿ ಉಪಸ್ಥಿತರಿದ್ದರು.
04 Sep 2024, 07:33 PM
Category: Kaup
Tags: