ಸೆಪ್ಟೆಂಬರ್ 7ರಿಂದ 10ರವರೆಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಚ್ಚಿಲ ಇದರ 37ನೇ ವರ್ಷದ ಗಣೇಶೋತ್ಸವ
ಉಚ್ಚಿಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಉಚ್ಚಿಲ ಇದರ ಆಯೋಜನೆಯಲ್ಲಿ37ನೇ ವರುಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆಪ್ಟೆಂಬರ್ ೦7ರ ಶನಿವಾರದಿಂದ ಸೆಪ್ಟೆಂಬರ್ 10 ಮಂಗಳವಾರ ತನಕ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ಶ್ರೀಮತಿ ಶಾಲಿನಿ ಡಾ. ಜಿ ಶಂಕರ್ ತೆರೆದ ಸಭಾಂಗಣದ ಶ್ರೀ ಲಕ್ಷ್ಮಿ ಮಂಟಪದಲ್ಲಿ ಜರಗಲಿದೆ.
ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವವು 37ನೇ ವರ್ಷಾಚರಣೆ ಮಾಡುತ್ತಿದ್ದು, ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.
ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
ಸೆಪ್ಟೆಂಬರ್ 7, ಶನಿವಾರ ಬೆಳಿಗ್ಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ವಿಗ್ರಹ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಶುದ್ಧೀಕರಣ, ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಗಣ ಯಾಗ, ಮಹಾಪೂಜೆ ನೆರವೇರಲಿದೆ.
ಸಂಜೆ, ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಮ್ಯಾಜಿಕ್ ಶೋ, ನೃತ್ಯ ವಿದುಷಿ, ಮಂಗಳ ಕಿಶೋರ್ ದೇವಾಡಿಗ ನೇತೃತ್ವದ ನಟೇಶ ನೃತ್ಯ ನಿಕೇತನ ಉಚ್ಚಿಲ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ, ನೃತ್ಯ ವೈಭವ ನಡೆಯಲಿದೆ. ಬಳಿಕ ಉಚ್ಚಿಲ ರಾತ್ರಿ ಪೂಜೆ, ರಂಗ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಸೆಪ್ಟೆಂಬರ್ 8, ಭಾನುವಾರ ಗೋಪಿಕಾ ಮತ್ತು ಸತೀಶ್ ಮಯ್ಯ, ದುಬೈ ಇವರಿಂದ ಗಣಪತಿ ಅಥರ್ವ ಶೀರ್ಷ ಯಾಗ ನೆರವೇರಲಿದೆ.
ಸಂಜೆ ಶಾಲಾ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಬಳಿಕ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ರಾತ್ರಿ ಪೂಜೆ, ರಂಗ ಪೂಜೆ, ಪ್ರಸಾದ ವಿತರಣೆ ನೆರವೇರಿಲಿದೆ.
ರಾತ್ರಿ 9 ಗಂಟೆಗೆ ಯಶಸ್ವಿ ಕಲಾವಿದೆರ್ ಮಂಜೇಶ್ವರ ಇವರಿಂದ "ಅಬ್ಬರ" ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಸೆಪ್ಟೆಂಬರ್ 9, ಸೋಮವಾರ, ಶ್ರೀಮತಿ ಮತ್ತು ಶ್ರೀಪತಿ ಭಟ್, ಶಾಂತಾ ಎಲೆಕ್ಟ್ರಿಕಲ್ಸ್ ಪೈ. ಲಿಮಿಟೆಡ್ ಉಡುಪಿ ಇವರಿಂದ 108 ತೆಂಗಿನಕಾಯಿಯ ಗಣ ಹೋಮ ನೆರವೇರಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಲಿದೆ.
ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮ, ರಾತ್ರಿ ಪೂಜೆ, ರಂಗಪೂಜೆ, ಪ್ರಸಾದ ವಿತರಣೆಯ ಬಳಿಕ ಪ್ರಶಸ್ತಿ ವಿಜೇತ ತೆಲಿಕೆದ ಕಲಾವಿದೆರ್ ಕೊಯಿಲ ಇವರಿಂದ "ಗೆಂದಗಿಡಿ" ತುಳು ನಾಟಕ ಪ್ರಸಾರಗೊಳ್ಳಲಿದೆ.
ಸೆಪ್ಟೆಂಬರ್ 10, ಮಂಗಳವಾರ ಗಣ ಯಾಗ, ವಿಶೇಷ ಅಪ್ಪದ ಸೇವೆ, ರಂಗ ಪೂಜೆ, ವಿಸರ್ಜನಾ ಪೂಜೆ, ಪ್ರಸಾದ ವಿತರಣೆ ಸಂಪನ್ನಗೊಳ್ಳಲಿದೆ.
ಸಂಜೆ 4 ಗಂಟೆಗೆ ಶ್ರೀದೇವರ ಮೆರವಣಿಗೆಯು ಸೆಕ್ಸೋಫೋನ್, ಚೆಂಡೆ, ವಾದ್ಯ, ಕುಣಿತ ಭಜನೆ, ಬ್ಯಾಂಡ್, ವಿವಿಧ ವೇಷ ಭೂಷಣ, ಕೀಲು ಕುದುರೆ, ಡಿ.ಜೆ ಸೌಂಡ್ಸ್ ಹಾಗೂ ಸ್ತಬ್ಧ ಚಿತ್ರಗಳನ್ನು ಒಳಗೊಂಡ ಟ್ಯಾಬ್ಲೋಗಳ ಶೋಭಾ ಯಾತ್ರೆಯೊಂದಿಗೆ ಎರ್ಮಾಳು ಶ್ರೀ ಜನಾರ್ಧನ ದೇಗುಲದವರೆಗೆ ಸಾಗಿ, ಅಲ್ಲಿಂದ ಮೂಳೂರು ಅಟೋ ನಿಲ್ದಾಣದವರೆಗೆ ಬಂದು ಉಚ್ಚಿಲ ಬದ್ಧಿಂಜೆ ಮಠದ ಪುಷ್ಕರಣಿಯಲ್ಲಿ ಜಲ ಸ್ಥಂಭನ ಗೊಳ್ಳಲಿದೆ ಈ ಬಗ್ಗೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
