ಪಡುಬಿದ್ರಿ ರೋಟರಿ, ಇನ್ನರ್‌ವೀಲ್ ಕ್ಲಬ್ - ಮುದ್ದು ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧೆ
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಮತ್ತು ಇನ್ನರ್‌ವೀಲ್ ಕ್ಲಬ್ ಪಡುಬಿದ್ರಿ ಇವರ ಸಂಯುಕ್ತಾಶ್ರಯದಲ್ಲಿ "ಮುದ್ದು ಕೃಷ್ಣ" ಮತ್ತು "ಯಶೋಧ ಕೃಷ್ಣ" ಸ್ಪರ್ಧೆಯನ್ನು ಪಡುಬಿದ್ರಿಯ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉದ್ಘಾಟಿಸಿದರು.
ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷೆ ತಸ್ನೀನ್ ಅರಾಹ್, ಇನ್ನರ್‌ವೀಲ್ ಅಧ್ಯಕ್ಷರು ಮಾತನಾಡಿದರು.
ಕಾರ್ಯಕ್ರಮದ ಸಂಚಾಲಕರಾದ ಗಣೇಶ್ ಶೆಟ್ಟಿಗಾರ್, ಗೀತಾ ಅರುಣ್, ಧನಲಕ್ಷ್ಮಿ,
ರೋಟರಿ ಕ್ಲಬ್ ಕಾರ್ಯದರ್ಶಿ ಹೇಮಲತಾ, ಇನ್ನರ್‌ವೀಲ್ ಕಾರ್ಯದರ್ಶಿ ಸ್ನೇಹಾ ಪ್ರವಿಣ್ ವೇದಿಕೆಯಲ್ಲಿದ್ದರು.
ತಸ್ನೀನ್ ಅರಾ ಸ್ವಾಗತಿಸಿದರು. ನವೀನ್ ಶೆಟ್ಟಿ ಕಾರ್ಯಕ್ರಮವನ್ನು ನೆರವೇರಿಸಿದರು. ಸುಹಾನ್ ಪೂಜಾರಿ ಕುಳಾಯಿ ಮತ್ತು ಸಹನಾ ಕುಳಾಯಿ ತೀರ್ಪುಗಾರರಾಗಿ ಸಹಕರಿಸಿದ್ದರು. ಬಿ.ಎಸ್.ಆಚಾರ್ಯ ಮತ್ತು ಅನಿತಾ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು. 75 ಸ್ಪರ್ಧಿಗಳು ಭಾಗವಹಿಸಿದ್ದರು.
