ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯಿಲ್ಲದ ಕಾಂಗ್ರೆಸ್ಸಿಗರಿಗೆ ಸೇಡಿನ ರಾಜಕೀಯವೊಂದೇ ಶ್ರೀ ರಕ್ಷೆಯಾಗಿದೆ : ಶಿಲ್ಪಾ ಜಿ ಸುವರ್ಣ
Thumbnail
ಉಡುಪಿ : ಜಿಲ್ಲೆಯ ಕುಂದಾಪುರದ ಶಿಕ್ಷಕರಾದ ಬಿ ಜಿ ರಾಮಕೃಷ್ಣ ಅವರಿಗೆ ಅಂತಿಮಗೊಳಿಸಲಾಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆಹಿಡಿಯುವ ಮೂಲಕ ಮತೀಯವಾದಿಗಳ ಆಶಯಗಳಿಗೆ ಪೂರಕವಾಗಿ ನಡೆದುಕೊಂಡಂತಹ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಯುವಮೋರ್ಚಾ ಹಾಗೂ ಮಹಿಳಾ ಮೋರ್ಚಾವು ಪ್ರತಿಭಟನೆಯನ್ನು ನಡೆಸಿತ್ತು. ಪ್ರತಿಭಟನೆಯನ್ನು ನಡೆಸಿದಂತಹ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಸಹಿತ ನಮ್ಮ ಪಕ್ಷದ 11 ಮಂದಿ ಪದಾಧಿಕಾರಿಗಳ ಮೇಲೆ ರಾಜ್ಯ ಸರಕಾರದ ಒತ್ತಡಕ್ಕೆ ಮಣಿದು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೆ ಸುವರ್ಣ ತಿಳಿಸಿದ್ದಾರೆ. ನಿರಂತರವಾಗಿ ಚುನಾವಣೆಗಳಲ್ಲಿ ತಮ್ಮ ವಿರುದ್ಧದ ಜನಾದೇಶದಿಂದಾಗಿ ಉಡುಪಿ ಜಿಲ್ಲೆಯಲ್ಲಿ ನೆಲೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷವೂ ಅಸಹನೀಯ ಸ್ಥಿತಿಯನ್ನು ತಲುಪಿದೆ ಹಾಗೂ ಜಿಲ್ಲೆಯಲ್ಲಿ ಸಂಘಟನಾ ಶಕ್ತಿಯನ್ನು ಹೊಂದಿರದ ಕಾಂಗ್ರೆಸ್ ಪಕ್ಷವೂ ಸೇಡಿನ ರಾಜಕಾರಣವನ್ನು ತನ್ನ ಶ್ರೀ ರಕ್ಷೆಯನ್ನಾಗಿಸಿಕೊಂಡಿದೆ. ತಮ್ಮ ವಿರುದ್ಧದ ಪ್ರತಿಭಟನೆಯನ್ನು ರಾಜಕೀಯ ಸವಾಲಾಗಿ ಸ್ವೀಕರಿಸುವ ಬದಲು ದ್ವೇಷದ ರಾಜಕಾರಣಕ್ಕೆ ಬಳಸಿಕೊಂಡು ಪ್ರತಿಭಟನಾಕಾರರ ಮೇಲೆ ಪ್ರಕರಣವನ್ನು ದಾಖಲಿಸುವ ಮೂಲಕ ತಮ್ಮ ಸೋಲಿನ ಸೇಡನ್ನು ತೀರಿಸಿಕೊಳ್ಳುತ್ತಿದೆ. ಅಧಿಕಾರದ ದುರ್ಬಳಕೆಯ ಮೂಲಕ ನಮ್ಮ ಬಿಜೆಪಿ ಕಾರ್ಯಕರ್ತರನ್ನು ಬೆದರಿಸಬಹುದೆಂದು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಕಾಂಗ್ರೆಸ್ಸಿನ ಈ ಗೊಡ್ಡು ಬೆದರಿಕೆಗಳನ್ನು ಸವಾಲಾಗಿ ಸ್ವೀಕರಿಸುತ್ತಾರೆ ವಿನಃ ಹೆದರುವ ಜಾಯಮಾನದ ಮನೋಸ್ಥಿತಿಯನ್ನು ನಮ್ಮ ಕಾರ್ಯಕರ್ತರು ಹೊಂದಿರುವುದಿಲ್ಲ ಎಂದು ತಿಳಿಸಿದ್ದಾರೆ.
09 Sep 2024, 08:21 PM
Category: Kaup
Tags: