ನ.30 ಮತ್ತು ಡಿ.1 : ವೀರ ಮಾರುತಿ ಕ್ರಿಕೆಟರ್ಸ್ ಪಡುಬಿದ್ರಿ ಆಶ್ರಯದಲ್ಲಿ ಹನುಮ ಟ್ರೋಫಿ -2024
ಪಡುಬಿದ್ರಿ : ವೀರ ಮಾರುತಿ ಕ್ರಿಕೆಟರ್ಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ನವೆಂಬರ್ 30 ಹಾಗೂ ಡಿಸೆಂಬರ್ 01 ರಂದು ನಡೆಯುವ ಕಡಲ ತೀರದ ಮುಗ್ಗೆರ್ಕಳ ಸಮಾಜ ಬಾಂಧವರ "ಹನುಮ ಟ್ರೋಫಿ -2024" ಸಮಾಜ ಬಾಂಧವರ ಒಗ್ಗಟ್ಟಿಗಾಗಿ ಕ್ರಿಕೆಟ್ ಪಂದ್ಯಾಟ ಇದರ ಓನರ್, ಐಕಾನ್, ಕ್ಯಾಪ್ಟನ್ ಹಾಗೂ ಎಲ್ಲಾ ಆಟಗಾರರ ಸಭೆಯ ಉದ್ಘಾಟನೆ ಹಾಗೂ ಪೋಸ್ಟರ್ ಅನಾವರಣ ಭಾನುವಾರ ಜರಗಿತು.
ಈ ಸಂದರ್ಭ ಅಧ್ಯಕ್ಷರಾದ ಜೀವನ್ ಪ್ರಕಾಶ್,
ಗೌರವ ಅಧ್ಯಕ್ಷ ವಿಠ್ಠಲ್ ಮಾಸ್ಟರ್, ಉಪಾಧ್ಯಕ್ಷ ದಿನೇಶ್ ಪಾತ್ರಿ, ತಂಡದ ಮಾಲಕರುಗಳಾದ ರಾಜ್ ಶೇಖರ್ ಮಟ್ಟು, ವಿಶ್ವನಾಥ್ ಮುಕ್ಕ, ಕೃಷ್ಣ ಮೂಳೂರು, ಶಶಿಕಾಂತ್ ಪಡುಬಿದ್ರಿ, ಶಶಿಕುಮಾರ್ ಮಟ್ಟು, ಸಂಜೀವ ಮಾಸ್ಟರ್ ಹೆಜಮಾಡಿ, ಎಲ್ಲಾ ತಂಡದ ಐಕಾನ್ ಮತ್ತು ಕ್ಯಾಪ್ಟನ್ ಹಾಗೂ ಆಟಗಾರರು ಉಪಸ್ಥಿತರಿದ್ದರು.
ಚೇತನ್ ಪಡುಬಿದ್ರಿ, ಸುಕೇಶ್ ಹೆಜಮಾಡಿ, ನಿತಿನ್ ಹೆಜಮಾಡಿ, ಧನಂಜಯ ಮಟ್ಟು ಪಂದ್ಯಾಟದ ಬಗ್ಗೆ ವಿವರಿಸಿ, ನಿರೂಪಿಸಿದರು.
