ಪಡುಬಿದ್ರಿ : 60 ಕ್ಕೂ ಅಧಿಕ ನೂತನ ಸದಸ್ಯರ ಸೇರ್ಪಡೆಯೊಂದಿಗೆ ಮುಂಡಾಲ ಮಹಾಬಾಂಧವ್ಯ
ಪಡುಬಿದ್ರಿ : ಮುಂಡಾಲ ಯುವ ವೇದಿಕೆ (ರಿ.) ಪಡುಬಿದ್ರಿ ಇದರ ವತಿಯಿಂದ ಭಾನುವಾರ ಪಡುಬಿದ್ರಿ ಸಾಯಿ ಆರ್ಕೇಡ್ ನಲ್ಲಿ ಮುಂಡಾಲ ಮಹಾ ಬಾಂಧವ್ಯ ಕಾರ್ಯಕ್ರಮ ನಡೆಯಿತು.
ಮುಂಡಾಲ ವೇದಿಕೆಗೆ ನೂತನವಾಗಿ ಸೇರ್ಪಡೆಗೊಂಡ ಸುಮಾರು 60 ಸದಸ್ಯರನ್ನು ಬರಮಾಡಿಕೊಳ್ಳುವ ವಿಶೇಷ ಕಾರ್ಯಕ್ರಮವನ್ನು ಮುಂಡ್ಕೂರು ಜಿ.ಕೆ ಲಕ್ಷ್ಮಣ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಂದಿನ ಡಿಸೆಂಬರ್ ನಲ್ಲಿ ಆಯೋಜಿಸಲಾಗಿರುವ "ತುಳುವೆರೆ ಗೊಬ್ಬುಲ್ನ ಬುಲೆಚ್ಚಿಲ್" ಕಾರ್ಯಕ್ರಮದ ಫಲಕವನ್ನು ಅನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾಸ್ಕರ್ ಪಡುಬಿದ್ರಿ, ಸುಧಾಕರ್.ಕೆ, ದಿನೇಶ್ ಪಲಿಮಾರ್, ಭಾಸ್ಕರ್ ಪಲಿಮಾರ್, ವೇದಿಕೆಯ ಅಧ್ಯಕ್ಷರಾದ ಶಿವಪ್ಪ ಸಾಲ್ಯಾನ್, ಮಂಜುನಾಥ ಎರ್ಮಾಳು, ಸವಿತಾ ಶಿವಪ್ಪ ಉಪಸ್ಥಿತರಿದ್ದರು.
ಸಂತೋಷ್ ನಂಬಿಯಾರ್ ಪ್ರಾಸ್ತಾವಿಕ ಮಾತನ್ನಾಡಿದರು. ಸುರೇಶ್ ಪಡುಬಿದ್ರಿ ಸ್ವಾಗತಿಸಿ, ನಿರ್ವಹಿಸಿದರು. ಪ್ರಸನ್ನ ಪಡುಬಿದ್ರಿ ವಂದಿಸಿದರು.
