ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ವತಿಯಿಂದ ಸಾಮಾಜಿಕ ಕಾರ್ಯ
Thumbnail
ಪಡುಬಿದ್ರಿ : ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿಯ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಸಂಸ್ಥೆಯ ಸದಸ್ಯರು ಪಡುಬಿದ್ರಿ ಬೀಚ್ ಗೆ ಹೋಗುವ ರಸ್ತೆಯ ಮಧ್ಯೆ ಕಾಮಿನಿ ನದಿಗೆ ನಿರ್ಮಾಣವಾದ ಸೇತುವೆಯಲ್ಲಿ ಹೊಂಡಬಿದ್ದು ಕಬ್ಬಿಣದ ಸರಳುಗಳು ಕಾಣುತ್ತಿದ್ದು ಅದನ್ನು ಸರಿಪಡಿಸಿ ಕಾಂಕ್ರೀಟ್ ಹಾಕಿದರು. ಕಳೆದ ಐದು ವರ್ಷಗಳಿಂದ ಸಮಾಜಸೇವಾ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ಈ ಬಾರಿಯೂ ಸಂಸ್ಥೆಯ ಸಾಮಾಜಿಕ ಜಾಲತಾಣದ ಉಸ್ತುವಾರಿ ಕಿರಣ್ ರಾಜ್ ಕರ್ಕೇರ ಹಾಗೂ ಸಂಘಟನಾ ಕಾರ್ಯದರ್ಶಿ ಸಂತೋಷ್ ಸಾಲಿಯಾನ್ ರವರ ನೇತೃತ್ವದಲ್ಲಿ ಸಂಸ್ಥೆಯ ಉತ್ಸಾಹಿ ಸದಸ್ಯರುಗಳಾದ ಪವನ್ ,ವರುಣ್, ವರ್ಣಿತ್ ರವರು ಸಹಕರಿಸಿದರು. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇವರಿಗೆ ಬಬುಲಿ ಹರ್ಬಲ್ ಬ್ಯುಟಿಪಾರ್ಲರ್ ಕಾರ್ನಾಡ್ ಇದರ ಮಾಲಕರಾದ ಗೀತಾ ಸಂತೋಷ್ ಹಾಗೂ ಸುಬ್ರಹ್ಮಣ್ಯ ರಾವ್ ಪಡುಬಿದ್ರಿ ಇವರು ಇಂದಿನ ಶ್ರಮದಾನಕ್ಕೆ ಬೇಕಾದ ವಸ್ತುಗಳ ವೆಚ್ಚ ಜೊತೆಗೆ ಶರಣ್ ಎಲೆಕ್ಟ್ರಾನಿಕ್ ನ ಮಾಲೀಕರಾದ ಪ್ರಶಾಂತ್ ಶೆಟ್ಟಿ, ಕಾವೇರಿ ಪೈಂಟ್ ಪಡುಬಿದ್ರಿಯ ಮಾಲೀಕರಾದ ಶರತ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್, ಕೊಲ್ನಾಡ್ ಪ್ರಸಿದ್ಧ ಉಧ್ಯಮಿಯಾದ ಪ್ರಶಾಂತ್ ಕಾಂಚನ್ ಹಾಗೂ ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷರಾದ ವೈ ಸುಧೀರ್ ಕುಮಾರ್ ಅವರು ಸಂಸ್ಥೆಯ ವತಿಯಿಂದ ಪರಿಕರಗಳನ್ನು ‌ಒದಗಿಸಿರುತ್ತಾರೆ.
02 Oct 2024, 03:51 PM
Category: Kaup
Tags: