ಚಂದ್ರನಗರ : ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ, ಉಚಿತ ಮೆಡಿಸಿನ್, ಮನೆ ಸಾಮಗ್ರಿ ಕಿಟ್ ವಿತರಣೆ
ಕಾಪು : ನಮ್ಮ ನಾಡ ಒಕ್ಕೂಟ(ರಿ) ಕಾಪು ತಾಲೂಕು ಹಾಗೂ ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಚಂದ್ರನಗರ ಇವರ ಜಂಟಿ ಆಶ್ರಯದಲ್ಲಿ ನುರಿತ ವೈದ್ಯರಿಂದ ಮರ್ಹೂಂ ಹಾಜಿ ಕೆ.ಉಮ್ಮರಬ್ಬ ರವರ ಸ್ಮರಣಾರ್ಥ ಇಪ್ಪತ್ತೇಳು ಮಕ್ಕಳಿಗೆ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮ ಹಾಗೂ ಉಚಿತ ಮೆಡಿಸಿನ್ ಮತ್ತು ಮನೆ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ನಲ್ಲಿ ನಡೆಯಿತು.
ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಅಧ್ಯಕ್ಷ, ಸಮಾಜ ಸೇವಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಸಮಾಜ ಸೇವೆಯೆ ನನ್ನ ತಂದೆಯ ಕನಸಾಗಿತ್ತು. ಸಮಾಜದಲ್ಲಿ ಆಶಕ್ತರು ಬಡವರಿಗಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸಿದ್ದು, ಸಾಮೂಹಿಕ ಮುಂಜಿ ಕಾರ್ಯಕ್ರಮವನ್ನು ಸಮಾಜದಲ್ಲಿ ಉತ್ತಮ ಸಾಮಾಜಿಕ ಕಾರ್ಯಕ್ರಮ ಹಾಕಿಕೊಳ್ಳುವ ಎನ್ ಎನ್ ಒ ಜಂಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜ ಸೇವೆ ಮಾಡಿದ್ದು ತೃಪ್ತಿಕರವಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ನಾಡ ಒಕ್ಕೂಟ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಅಶ್ರಫ್ ಪಡುಬಿದ್ರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್, ಎನ್ ಎನ್ ಒ ಘಟಕದ ಜಿಲ್ಲಾ ಉಪಾಧ್ಯಕ್ಷ ಕಾಪು ತಾಲೂಕು ಉಸ್ತುವಾರಿ ಯು.ಎ ರಶೀದ್, ಸೌದಿ ಅರೇಬಿಯಾ ಅನಿವಾಸಿ ಭಾರತೀಯ ಉದ್ಯಮಿ ಮೊಹಮ್ಮದ್ ಇಲ್ಯಾಸ್ ಹಮೀದ್, ದ.ಕ ಜಿಲ್ಲಾ ಮದ್ರಸ ಮೆನೆಜ್ಮೆಂಟ್ ಜಿಲ್ಲಾಧ್ಯಕ್ಷರಾದ ಎಂ.ಎಚ್ ಹಾಜಿ ಮೊಯಿದಿನ್ ಅಡ್ದುರು, ಎನ್ ಎನ್ ಒ ಪರ್ಯವರಣ ಸಮಿತಿ ರಾಜ್ಯಾಧ್ಯಕ್ಷರಾದ ಡಾ.ಶೇಕ್ ವಹಿದ್ ದಾವುದ್, ಎನ್ ಎನ್ ಒ ಸೆಂಟ್ರಲ್ ಕಮಿಟಿ ಕೋಶಾಧಿಕಾರಿ ಫೀರ್ ಮೊಹಮ್ಮದ್, ಜಮೀಯತುಲ್ ಫಲಹ್ ಕಾಪು ತಾಲೂಕು ಅಧ್ಯಕ್ಷರಾದ ಶಬೀ ಅಹ್ಮದ್ ಖಾಝಿ ಡಾ.ಸಿದ್ದಿಕ್ ಅಡ್ದುರು ಉಪಸ್ಥಿತರಿದ್ದರು.
ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ರಶೀದ್ ಸಖಾಫಿ ಅಲ್ ಖಾಮೀಲ್ ದುವಾ ನೆರವೇರಿಸಿದರು.
ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಯೂಸುಫ್ ಮೂಳೂರು ಕಾರ್ಯಕ್ರಮ ನಿರೂಪಿಸಿದರು. ಎಸ್ ಎ ಅಬ್ದುಲ್ ರಝಕ್ (ಕೊಪ್ಪ )ಚಂದ್ರನಗರ ವಂದಿಸಿದರು.
