ಕಾಪು : ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು - ನವರಾತ್ರಿ ಮಹೋತ್ಸವ
Thumbnail
ಕಾಪು : ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು, ಕಾಪು ಇಲ್ಲಿಯ ಶ್ರೀ ದೇವಿಯ ಸನ್ನಿಧಾನದಲ್ಲಿ ಅ. 03 ಗುರುವಾರದಿಂದ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು ಅ. 12, ಶನಿವಾರದವರೆಗೆ ಜರಗಲಿದೆ. ಅ.06, ಭಾನುವಾರ ಉಳಿಯಾರು ಯು. ಕೃಷ್ಣಮೂರ್ತಿ ಆಚಾರ್ಯರವರ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 11ಕ್ಕೆ ಚಂಡಿಕಾ ಹೋಮ ನಡೆಯಲಿರುವುದು. ಮಧ್ಯಾಹ್ನ ಗಂಟೆ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಮಧ್ಯಾಹ ಗಂಟೆ 3 ಕ್ಕೆ ಮಹಾಪೂಜೆ ಹಾಗೂ ದರ್ಶನ ಸೇವೆ ಜರಗಲಿರುವುದು. ಭಕ್ತಾಭಿಮಾನಿಗಳು ಈ ಕಾರ್ಯಕ್ರಮಗಳಿಗೆ ಆಗಮಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಮಾರಿಯಮ್ಮ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ, ಮಲ್ಲಾರು ಕಾಪು ದೇವಳದ ಪ್ರಕಟಣೆ ತಿಳಿಸಿದೆ.
05 Oct 2024, 09:07 AM
Category: Kaup
Tags: