ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಕಾಯಕ ರತ್ನ ರಾಜ್ಯ ಪ್ರಶಸ್ತಿ ಪ್ರದಾನ
ಉಡುಪಿ : ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ಉಡುಪಿ ಜಿಲ್ಲಾ ವತಿಯಿಂದ ಇತ್ತಿಚೆಗೆ ಗೌರವ ಡಾಕ್ಟರೆಟ್ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಕಾಯಕ ರತ್ನ ರಾಜ್ಯ ಪ್ರಶಸ್ತಿಯನ್ನು ವಿಶ್ವ ಮನವಾದಿಕಾರ ಹಕ್ಕು ಲೋಕ ಪರಿಷತ್ ಇದರ ಅಂತರಾಷ್ಟ್ರೀಯ ಅಧ್ಯಕ್ಷರಾದ ಸಮಾಜ ರತ್ನ ಡಾ.ಶಂಕರ್ ಶೆಟ್ಟಿ ಉಡುಪಿ ಲಯನ್ಸ್ ಕ್ಲಬ್ ನಲ್ಲಿ ನಡೆದ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಡಾ.ಎಂ ಫಾರೂಕ್ ರವರ ಸಮಾಜ ಸೇವೆ ಪರಿಗಣಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು ಹಾಗೂ ಮುಂದೆಯೂ ದೇವರು ಅವರ ಸಮಾಜ ಸೇವೆ ಮುಂದುವರೆಸಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ವಿಶ್ವ ಮಾನವಾಧಿಕಾರಿ ಹಕ್ಕು ಲೋಕ ಪರಿಷತ್ ಇದರ ಕಾನೂನು ಸಲಹೆಗಾರರು ಶ್ಯಾಮ ಸುಂದರ ನಾಯರಿ, ಜಿಲ್ಲಾಧ್ಯಕ್ಷರಾದ ಎಂ.ಇಕ್ಬಾಲ್ ಕುಂಜಿಬೆಟ್ಟು, ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಉಡುಪಿ ನ್ಯಾಯವಾದಿ ಅಖಿಲ್ ಬಿ ಹೆಗ್ಡೆ, ಮೊಹಮ್ಮದ್ ಇಕ್ಬಾಲ್ ಮನ್ನಾ ಮತ್ತಿತರರು ಉಪಸ್ಥಿತರಿದ್ದರು.
