ಉಚ್ಚಿಲ : ಮುದ್ದು ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ
ಉಚ್ಚಿಲ : ಉಡುಪಿ ಉಚ್ಚಿಲ ದಸರಾ -2024 ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಮೂರರಿಂದ ಒಂಭತ್ತು ವರ್ಷ ವಯಸ್ಸಿನ ಮುದ್ದು ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯು ಶ್ರೀಮತಿ ಶಾಲಿನಿ ಡಾ| ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ಶನಿವಾರ ಜರಗಿತು.
ಸ್ಪರ್ಧೆಯಲ್ಲಿ ಅದ್ವಿತಿ ಎ. ಪೂಜಾರಿ, ಕೋಟ ಪ್ರಥಮ, ತಪಸ್ಯ ನಾಗಪ್ರಸಾದ್,ಮಲ್ಪೆ ದ್ವಿತೀಯ,
ಸನಿಹ ಕೆ. ಕಾಪು ತೃತೀಯ ಬಹುಮಾನ ಪಡೆದಿರುತ್ತಾರೆ. ಪ್ರೋತ್ಸಾಹಕರ ಬಹುಮಾನವಾಗಿ ತಲಾ ರೂ. ಒಂದು ಸಾವಿರ ನೀಡಲಾಗಿದ್ದು, ಒಟ್ಟು 62 ಸ್ಪರ್ಧಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ವಿದ್ಯುಷಿ ರಶ್ಮಿ ಸರಳಾಯ, ಮಂಗಳೂರು, ಶ್ರದ್ಧಾ ಪ್ರಭು ಮಂಗಳೂರು, ದೀಪ್ತಿಶ್ರೀ ಜೋಗಿ ಮಂಗಳೂರು ಸಹಕರಿಸಿದ್ದರು.
