ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಕಾಪು ಜೆ.ಸಿ.ಐ ವತಿಯಿಂದ ಸನ್ಮಾನ
Thumbnail
ಕಾಪು : ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿ ಸಮಾಜಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತ ಸಮಾಜ ಸೇವೆಗಾಗಿ ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದು ಇತ್ತೀಚೆಗೆ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ ವಿದ್ಯಾಲಯ ಚೆನ್ನೈ ಘಟಕದಿಂದ ಗೌರವ ಡಾಕ್ಟರೆಟ್ ಪದವಿ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಜೆ.ಸಿ.ಐ ಕಾಪು ವಲಯದಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಪು ಜೆ.ಸಿ.ಐ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಜಗದೀಶ್ ಬಂಗೇರ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಗುರ್ಮೆ, ಪೂರ್ವಧ್ಯಕ್ಷರುಗಳಾದ ದೀಪಕ್ ಕುಮಾರ್ ಎರ್ಮಾಳ್, ಅರುಣ್ ಶೆಟ್ಟಿ ಪಾದೂರು, ರಾಜೇಂದ್ರ ಬಿ.ಕೆ, ಹರೀಶ್ ದೇವಾಡಿಗ, ರಾಕೇಶ್ ಕುಂಜೂರು ಮತ್ತಿತರರು ಉಪಸ್ಥಿತರಿದ್ದರು.
07 Oct 2024, 09:53 PM
Category: Kaup
Tags: