ಪಡುಬಿದ್ರಿ : ಬಾಲ ಗಣಪತಿಯ ಜಲಸ್ತಂಭನ
ಪಡುಬಿದ್ರಿ : ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಹಿಂದಿನ ಕಾಲದಲ್ಲಿ ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಬಾಲ ಗಣಪತಿಯ
ಜಲಸ್ತಂಭನ ಶನಿವಾರ ಸಂಜೆ ಜರಗಿತು.
ವಿಶೇಷವಾಗಿ ಗಣೇಶ ಚತುರ್ಥಿಯಿಂದ ಮೊದಲ್ಗೊಂಡು ನವರಾತ್ರಿಯಾದ್ಯಂತ ಪ್ರತಿದಿನ ಸಾಯಂಕಾಲ ಭಕ್ತರಿಂದ ಹರಕೆಯ ರೂಪವಾಗಿ ರಂಗಪೂಜೆ ನಡೆಯುತ್ತದೆ. ವಿಜಯದಶಮಿಯಂದು ಬೆಳಗ್ಗಿನಿಂದ ಪೂಜಾ ವಿಧಿವಿಧಾನಗಳು ನಡೆದು ಸಂಜೆ ಪಲ್ಲಕ್ಕಿಯ ಮೂಲಕ ಗಣಪತಿಯ ಮೃಣ್ಮಯ ಮೂರ್ತಿಯು ಶ್ರೀ ಕ್ಷೇತ್ರದಿಂದ ಪೇಟೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಕೆಳಗಿನ ಪೇಟೆಯ ರಸ್ತೆಯ ಮೂಲಕ ಬೀಚ್ ರಸ್ತೆಗೆ ಸಾಗಿ ಗುಡ್ಡೆಚ್ಚಿಗೆ ತಲುಪಿ ಅಲ್ಲಿ ಕಟ್ಟೆ ಪೂಜೆ, ತಪ್ಪಂಗಾಯಿ ಸೇವೆಯ ಬಳಿಕ ಮುಂದೆ ಸಾಗಿ ಸಮುದ್ರದಲ್ಲಿ ಗಣಪತಿಯ ಮೂರ್ತಿಯನ್ನು ಜಲಸ್ತಂಭನ ಮಾಡಲಾಯಿತು.
ಮೆರವಣಿಗೆಯಲ್ಲಿ ಕುಣಿತ ಭಜನಾ ತಂಡ, ವಿವಿಧ ವೇಷಗಳು, ಹುಲಿವೇಷ ಕುಣಿತ ತಂಡ ಪಾಲ್ಗೊಂಡಿದ್ದವು.
