ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಪ್ರತಿಷ್ಠಿತ ವಫಾ ಸಂಸ್ಥೆಯಿಂದ ಸನ್ಮಾನ
Thumbnail
ಕಾಪು : ಉಡುಪಿ-ಮಂಗಳೂರು ನಗರದ ಪ್ರತಿಷ್ಠಿತ ಸುಪ್ರಸಿದ್ದ ವಫಾ ಸಂಸ್ಥೆಯವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಡಾ.ಎಂ.ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರನ್ನು ವಫಾ ಸಂಸ್ಥೆಯು ಬೈಕಂಪಾಡಿ ಅಡ್ಕ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಫಾ ಸಂಸ್ಥೆಯ ಸ್ಥಾಪಕರಾದ ಅಬ್ದುಲ್ ವಹಾಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಫಾರೂಕ್ ಅವರ ಸಮಾಜ ಸೇವೆಯು ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್, ಮಂಗಳೂರು ಮಾಜಿ ಮೇಯರ್ ಅಶ್ರಫ್, ತುಳುವಿನ ಪ್ರಖ್ಯಾತ ಚಿತ್ರನಟರಾದ ದೇವಿದಾಸ್ ಕಾಪಿಕಾಡ್, ಸುಮಂತ, ರಾಹುಲ್ ಅಮೀನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಕ್, ಸಾಹಿತಿ ಮುಸ್ತಾಕ್ ಹೆನ್ನಾಬೈಲು, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷರಾದ ತಸ್ನೀನ್ ಅರಾ, ಉಡುಪಿ ಜಿಲ್ಲಾ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶೇಕಬ್ಬ ಉಚ್ಚಿಲ, ವಫಾ ಸಂಸ್ಥೆಯ ಮುಂದಾಳು ಜುನೈದ್ ಉಚ್ಚಿಲ ಮತ್ತಿತರರು ಉಪಸ್ಥಿತರಿದ್ದರು.
17 Oct 2024, 01:42 PM
Category: Kaup
Tags: