ಅ. 27 : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲಾ ಮಟ್ಟದ
ಪಡುಬಿದ್ರಿ : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಉಭಯ ಜಿಲ್ಲಾ ಮಟ್ಟದ "ಗೂಡುದೀಪ ಸ್ಪರ್ಧೆ" ಅಕ್ಟೋಬರ್ 27, ಆದಿತ್ಯವಾರ ಸಂಜೆ 6 ಗಂಟೆಗೆ ಬೋರ್ಡ್ ಶಾಲಾ ಮೃೆದಾನ( ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿ ಇಲ್ಲಿ ಆಯೋಜಿಸಲಾಗಿದೆ.
ಸಾಂಪ್ರದಾಯಿಕ ಗೂಡುದೀಪ ಮತ್ತು ಆಧುನಿಕ ಗೂಡುದೀಪ ಸ್ಪರ್ಧಾ ವಿಭಾಗಗಳಿದ್ದು,
ನೊಂದಾವಣೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವವೂ ಜರಗಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7090460951 ಸಂಪರ್ಕಿಸಿ ಎಂದು ರಾಗ್ ರಾಂಗ್ ಕಲ್ಚರಲ್ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ವಿಶ್ವಾಸ್ ವಿ.ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯ ನಿಯಮಗಳು: ಸಾಂಪ್ರದಾಯಿಕ ಮತ್ತು ಆಧುನಿಕ ವಿಭಾಗದಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಿಗೆ ನಗದು, ಶ್ವಾಶತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಸಂಜೆ 5 ಗಂಟೆಗೆ ತಮ್ಮ ಗೂಡುದೀಪದೊಂದಿಗೆ ಶಾಲಾ ಮೈದಾನದಲ್ಲಿ ಹಾಜರಿರಬೇಕು. ಎಲ್ಲ ಗೂಡುದೀಪಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಮಾಡಿಕೊಡಲಾಗುವುದು.
