ಕುಲಾಲ ಸಂಘ ಹೆಬ್ರಿ : ದ್ವಿತೀಯ ವರ್ಷದ ಕ್ರೀಡಾಕೂಟ ಸಂಪನ್ನ
Thumbnail
ಉಡುಪಿ : ಕುಲಾಲ ಸಂಘ (ರಿ.) ಹೆಬ್ರಿ ತಾಲೂಕು ವತಿಯಿಂದ ನಡೆದ ದ್ವಿತೀಯ ವರ್ಷದ ಕ್ರೀಡಾಕೂಟವು ಹೆಬ್ರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಉಪಾಧ್ಯಕ್ಷರಾದ ಅಣ್ಣಪ್ಪ ಕುಲಾಲ್ ಚಾರ ಮಾತನಾಡಿ ಕ್ರೀಡಾ ಕೂಟವು ಮತ್ತು ನವೆಂಬರ್ 17 ರಂದು ನಡೆಯುವ ಮಹಾಸಭೆಯು ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದರು. ಗೌರವಾದ್ಯಕ್ಷರದ ಬೋಜ ಕುಲಾಲ್ ಬೆಳ್ಳಂಜೆ ಮಾತನಾಡಿ ಸಂಘದ ಅಭಿವೃದ್ಧಿ ಆದರೆ ಸಮಾಜವು ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು. ಅಧ್ಯಕ್ಷರಾದ ಸುರೇಂದ್ರ ವರಂಗ ಮಾತನಾಡಿ ಕ್ರೀಡಾ ಕೂಟವು ಸಂಘದ ಭವಿಷ್ಯಕ್ಕಾಗಿ ನಮ್ಮ ಸಮಾಜದ ಐಕ್ಯತೆಗಾಗಿ ಎಂದು ಹೇಳಿದರು. ಶ್ರೀರಾಮ್ ಜುವೆಲ್ಲರ್ ಮಾಲಕರಾದ ನಾರಾಯಣ್ ಕೆ ಕುಲಾಲ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಪ್ರಸನ್ನ ಕುಲಾಲ್, ಕೋಶಾಧಿಕಾರಿ ಜಯರಾಮ್ ಹಾಂಡ, ಮಹಿಳಾ ಘಟಕದ ಅದ್ಯಕ್ಷರಾದ ಸುಮಿತ್ರಾ ಕುಲಾಲ್, ಮಹಿಳಾ ಘಟಕದ ಕ್ರೀಡಾ ಕಾರ್ಯದರ್ಶಿ ಅನುಷಾ ಕುಲಾಲ್ ಗುಡ್ಡೆಯಂಗಡಿ, ಹೆಬ್ರಿ ತಾಲೂಕು ಕುಲಾಲ ಸಮಾಜದ ಹಿರಿಯ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು. ರಚಿತಾ ಕುಲಾಲ್ ಸ್ವಾಗತಿಸಿದರು. ಸುಕೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
29 Oct 2024, 05:17 AM
Category: Kaup
Tags: