ಆನೆಗುಂದಿ ಶ್ರೀ ಸರಸ್ವತೀ ಸೂರ್ಯ ಚೈತನ್ಯ ಶಾಲೆ ಕುತ್ಯಾರು : ಕನ್ನಡ ರಾಜ್ಯೋತ್ಸವ ಆಚರಣೆ
ಕಾಪು : ಆನೆಗುಂದಿ ಶ್ರೀ ಸರಸ್ವತೀ ಸೂರ್ಯ ಚೈತನ್ಯ ಶಾಲೆ ಕುತ್ಯಾರು ಇಲ್ಲಿ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಶೈಕ್ಷಣಿಕ ಸಲಹೆಗಾರರಾದ ದಿವಾಕರ ಆಚಾರ್ಯ ಗೇರುಕಟ್ಟೆರವರು ವಹಿಸಿ ಕನ್ನಡ ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಮಾತನಾಡಿದರು.
ಶಾಲೆಯ ಪ್ರಾಂಶುಪಾಲರಾದ ಸಂಗೀತಾ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶುಭಾಶಯ ಕೋರಿದರು. ಕನ್ನಡ ಶಿಕ್ಷಕರಾದ ಮಂಜುನಾಥರವರು ಕನ್ನಡ ರಾಜ್ಯೋತ್ಸವದ ಹಿನ್ನಲೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು.
ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ದನಿಶ್,
ರಶ್ಮಿತಾ ಭಾಷಣ ಹಾಗೂ ವಿವಿಧ ಕಲಾಪ್ರಕಾರಗಳಿಂದ ಕೂಡಿದ ಸಮೂಹ ನೃತ್ಯ ಕಾರ್ಯಕ್ರಮವು ಎಲ್ಲರ ಮನಸೂರೆಗೊಂಡಿತು.
ಕನ್ನಡ ಶಿಕ್ಷಕಿಯಾದ ಸೌಮ್ಯ ಕಾರ್ಯಕ್ರಮ ನಿರೂಪಿಸಿ, ಅಮಿತಾ ವಂದಿಸಿದರು.
