ಕಾಪು : ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟ
Thumbnail
ಕಾಪು : ಇಲ್ಲಿನ ಮಲ್ಲಾರು ಮೌಲನಾ ಅಜಾದ್ ಮಾದರಿ ಶಾಲೆಯ ವಾರ್ಷಿಕ ಕ್ರೀಡಾಕೂಟವು ನ.7 ರಂದು ಉರ್ದು ಶಾಲೆಯ ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶಹನವಾಜ್ ಫಾಝಲೂದ್ದಿನ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡಾಕೂಟದ ಪಥ ಸಂಚಲನದ ವಂದನ ಸ್ವೀಕಾರವನ್ನು ಮಹೇಶ್ ಬೆಳಪು ಅವರು ಸ್ವೀಕರಿಸಿ ಶುಭ ಹಾರೈಸಿದರು. ಸಭಾ ಅಧ್ಯಕ್ಷತೆಯನ್ನು ಮುಸ್ತಾಕ್ ಬೆಳಪು ಅವರು ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೌಲನಾ ಅಜಾದ್‌ ಕಾರ್ಕಳ ಶಾಲೆಯ ಶಿಕ್ಷಕರಾದ ಸಂತೋಷ್, ಜಮಾ ತೇ ಇಸ್ಲಾಂ ಹಿಂದ್ ಕಾಪು ಅಧ್ಯಕ್ಷರಾದ ಅನ್ವರ್ ಅಲಿ, ಕಾಪು ತಾಲ್ಲೂಕು ಕ್ರೀಡಾಧಿಕಾರಿ ರಿತೇಶ್‌ ಶೆಟ್ಟಿ, ಶಾಹಿದ್, ಫಾರೂಕ್, ರಾಜೇಂದ್ರ, ವೀಣಾ, ಖಾತುನ್ ಬಿ ಉಪಸ್ಥಿತರಿದ್ದರು. ನದಾ ಬಾನು ಸ್ವಾಗತಿ ಸಿದರು. ದಾಕ್ಷಾಯಣಿ ಶೆಟ್ಟಿ ವಂದಿಸಿದರು. ನೀಹಾ ನಿರೂಪಿಸಿದರು.
Additional image
07 Nov 2024, 10:20 PM
Category: Kaup
Tags: