ಕಾಪು : ಕೊಪ್ಪಲಂಗಡಿಯಲ್ಲಿ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಚಾಲನೆ
Thumbnail
ಕಾಪು : ಶ್ರೀ ಜನಾರ್ದನ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ವಾಸುದೇವ ಸ್ವಾಮಿ ಸೇವಾ ಭಜನಾ ಮಂಡಳಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನ ಕೊಪ್ಪಲಂಗಡಿ ಇಲ್ಲಿ ಗುರುವಾರ ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು. ಅಖಂಡ ತ್ರಿಕಾಹ ನಾಮ ಸಂಕೀರ್ತನೋತ್ಸವವು ನ.7, ಗುರುವಾರದಿಂದ, ನ.10, ಆದಿತ್ಯವಾರದವರೆಗೆ ಜರಗಲಿದೆ. ನ.10, ಆದಿತ್ಯವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅಪರಾಹ್ನ ಅನ್ನಸಂತರ್ಪಣೆಯೂ ನಡೆಯಲಿದೆ.
Additional image
07 Nov 2024, 10:37 PM
Category: Kaup
Tags: