ಪಲಿಮಾರುವಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
Thumbnail
ಪಲಿಮಾರು : ಹೊಯ್ಗೆ ಫ್ರೆಂಡ್ಸ್ ಹೊಯ್ಗೆ ಪಲಿಮಾರು, ಶ್ರೀದೇವಿ ಫ್ರೇಂಡ್ಸ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ‌ಮಣಿಪಾಲ ಇವರ ಸಹಕಾರದಲ್ಲಿ ಶ್ರೀ ಗಣೇಶ ಮಂಟಪ‌ ಪಲಿಮಾರಿನಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನ‌‌ ಇದರ ಪ್ರಧಾನ ಅರ್ಚಕರರಾದ ಶ್ರೀನಿವಾಸ ಉಡುಪ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೊಯ್ಗೆ ಫ್ರೇಂಡ್ಸ್ ಹಾಗೂ ಶ್ರಿದೇವಿ ಫ್ರೆಂಡ್ಸ್ ಕಳೆದ ಏಳು ವರ್ಷಗಳಿಂದ ರಕ್ತದಾನದಂತಹ ಮಹತ್ಕಾರ್ಯ ಆಯೋಜಿಸುವ ಮೂಲಕ ಇತರ ಸಂಘಟನೆಗಳಿಗೆ ಮಾದರಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಕ್ತದ ಆಪತ್ಬಾಂದವ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ಪಲಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಯೇಶ್ವರ ಪೈ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗಾಯತ್ರಿ ಪ್ರಭು, ಪ್ರಬಂಧಕರು, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು ಪ್ರಬಂಧಕ ಕಿರಣ್ ಶೆಟ್ಟಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದ ವೈದ್ಯ ಡಾ.ಲಿಂಗೇಶ್, ಹೊಯ್ಗೆ ಫ್ರೇಂಡ್ಸ್ ಪಲಿಮಾರು ಅಧ್ಯಕ್ಷ ರಿತೇಶ್ ದೇವಾಡಿಗ, ಹರೀಶ್ ಪೂಜಾರಿ, ಶ್ರೀದೇವಿ ಫ್ರೆಂಡ್ಸ್ ಅವರಾಲು ಮಟ್ಟು ಅಧ್ಯಕ್ಷ ಹರೀಶ್ ಪೂಜಾರಿ, ಪಲಿಮಾರು ಗ್ರಾಮ ಪಂಚಾಯತ್ ಸದಸ್ಯ ಶಿವರಾಂ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಾಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿದರು. ಸತೀಶ್ ಪಲಿಮಾರು ವಂದಿಸಿದರು.
10 Nov 2024, 04:41 PM
Category: Kaup
Tags: