ಕಾಪು : ವೀರ ವನಿತೆ ಒನಕೆ ಓಬವ್ವ ದಿನಾಚರಣೆ
Thumbnail
ಕಾಪು : ಒನಕೆ ಓಬವ್ವ ತಮ್ಮ ಅಸಾಧಾರಣ ಸಮಯ ಪ್ರಜ್ಞೆ, ಧೈರ್ಯ, ದೇಶಪ್ರೇಮಗಳ ಮೂಲಕ ಸಬಲ ನಾರೀಶಕ್ತಿ ಪ್ರತೀಕವಾಗಿದ್ದು ನಾವೆಲ್ಲರೂ ಅವರ ಆದರ್ಶಗಳನ್ನು ಅಳವಡಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಕರೆ ನೀಡಿದರು. ಅವರು ಸೋಮವಾರ ತಹಶಿಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಒನಕೆ ಓಬವ್ವ ದಿನಾಚರಣೆಯಲ್ಲಿ ಮಾತನಾಡಿದರು. ವೀರವನಿತೆ ಒನಕೆ ಓಬವ್ವರ ಆದರ್ಶಗಳು ನಮ್ಮ ಬಾಳಿನ ಬೆಳಕು. ಆಕೆ ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ, ಯಾರೂ ಮರೆಯಲು ಸಾಧ್ಯವಿಲ್ಲ. ಅವರು ನಾರಿಶಕ್ತಿಯ ಪ್ರತೀಕವಾಗಿ ನಮಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು. ಸಮಾರಂಭದಲ್ಲಿ ಉಪತಹಶೀಲ್ದಾರ್ ಗಳಾದ ರವಿಕಿರಣ್, ಅಶೋಕ್ ಎನ್ ಕೋಟೆಕಾರ್, ದೇವಕಿ, ಸಿಬ್ಬಂದಿ ಹಾಜರಿದ್ದರು. ಸತೀಶ್ ರವರು ಕಾರ್ಯಕ್ರಮ ನಿರೂಪಿಸಿದರು.
11 Nov 2024, 06:03 PM
Category: Kaup
Tags: