ಶ್ರೀ ಕ್ಷೇತ್ರ ಶಂಕರಪುರ : ಬೀದಿ ಶ್ವಾನ ಸಂರಕ್ಷಣಾ ಆಚರಣೆ
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾಸಂಕಲ್ಪದಂತೆ ಹೃದಯವಂತ ಪ್ರಾಣಿ ಪ್ರಿಯರ ಉಪಸ್ಥಿತಿಯಲ್ಲಿ
ಬೀದಿ ಶ್ವಾನ ಸಂರಕ್ಷಣಾ ಆಚರಣೆಯನ್ನು ದೀಪ ಬೆಳಗಿಸಿ ಚಾಲನೆ ನೀಡಲಾಯಿತು.
ರಘರಾಮ್ ಶೆಟ್ಟಿ ಕೊಪ್ಪಲಂಗಡಿ, ವಿಕ್ಕಿ ಪೂಜಾರಿ ಮಡುಂಬು, ರಾಘವೇಂದ್ರ ಪ್ರಭು ಕರ್ವಾಲು, ತನುಲ, ಗೀತಾಂಜಲಿ ಎಮ್.ಸುವರ್ಣ, ವೀಣಾ ಎಸ್.ಶೆಟ್ಟಿ, ದಾಮೋದರ ಶರ್ಮಾ , ಸುಧೀಂದ್ರ ಐತಾಳ್ ಸಾಲಿಗ್ರಾಮ, ರವೀಂದ್ರ ಹೆಬ್ಬಾರ್ ಬ್ರಹ್ಮಾವರ, ಪ್ರಶಾಂತ್ ಪೂಜಾರಿ ಕಾಪು, ಶ್ರೀ ನವೀನ್ ಕಾಪು ಮತ್ತು ಶ್ರೀಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು. ನಂತರ ಉಡುಪಿ ಜಿಲ್ಲೆಯಲ್ಲಿ ಬೀದಿ ಶ್ವಾನಗಳಿಗೆ ಆಹಾರ ನೀಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರದ ಭಕ್ತರಿಗೆ ವಾಗ್ಮಿ, ನಿರೂಪಕರಾದ ದಾಮೋದರ ಶರ್ಮಾ ಅವರು ಕಾಪು ಹೊಸ ಮಾರಿಗುಡಿಯ ಮಾರಿಯಮ್ಮನ ಕ್ಷೇತ್ರ ಜೀರ್ಣೋದ್ಧಾರ ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
