ಕುಲದ ನೆಲೆ ಕೇಳಿದ ಕನಕದಾಸರದ್ದು ವಿಶ್ವಮಾನವ ವ್ಯಕ್ತಿತ್ವ : ತಹಶಿಲ್ದಾರ್ ಡಾ.ಪ್ರತಿಭಾ ಆರ್.
ಕಾಪು : ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ವಿಶ್ವಮಾನವರಾದರು ಎಂದು ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ ಹೇಳಿದರು.
ಅವರು ಸೋಮವಾರ ತಹಶಿಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾಸಶ್ರೇಷ್ಠರಾದ ಕನಕದಾಸರ ಬದುಕೇ ಮಾನವ ಕುಲಕ್ಕೆ ಒಂದು ಸಂದೇಶ. ಜಾತ್ಯಾತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಸರಳ ಜೀವನ ನಡೆಸಿ ಭಕ್ತಿ ಪರಾಕಾಷ್ಠೆಯಿಂದ ಉಡುಪಿ ಶ್ರೀಕೃಷ್ಣನನ್ನೇ ತನ್ನೆಡೆಗೆ ತಿರುಗಿಸಿಕೊಂಡ ದಾಸ ಶ್ರೇಷ್ಟರ ಜೀವನವೇ ಸಂದೇಶವಾಗಿದೆ ಎಂದು ತಹಶಿಲ್ದಾರ್ ಹೇಳಿದರು.
ಈ ಸಂದರ್ಭ ತಹಶಿಲ್ದಾರ್ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
