ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ : ಕನಸುಗಳ ಪೆಟ್ಟಿಗೆ ವಿನೂತನ ಕಾರ್ಯಕ್ರಮ
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬ್ರಹ್ಮಾವರ ಮಟಪಾಡಿ ಶ್ರೀ ವಿಜಯ ಬಾಲನಿಕೇತನ ಮಕ್ಕಳ ಆಶ್ರಮದಲ್ಲಿ ಕನಸಿನ ಪೆಟ್ಟಿಗೆ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಫೌಂಡೇಶನ್ ನ ಮುಖ್ಯ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ಹೋಂ ಡಾಕ್ಟರ ಫೌಂಡೇಶನ್ ನಡೆದುಬಂದ ಹಾದಿ ಬಗ್ಗೆ ವಿವರಿಸಿದರು. ಮುಂದಿನ ದಿನಗಳಲ್ಲಿ ವಿವಿಧ ಕಾನ್ಸೆಪ್ಟ್ ಗಳ ಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.
ವೇದಿಕೆಯಲ್ಲಿ ಆಶ್ರಮದ ಅಧ್ಯಕ್ಷರಾದ ಗಿರಿಶ್ಚಂದ್ರ ಆಚಾರ್ಯ, ವಿಶ್ವನಾಥ್ ಶೆಟ್ಟಿ, ಜಯರಾಮ್ ನಾಯರಿ, ಮುದ್ದು ಜತ್ತನ್ನ ಪೂರ್ಣೇಶ್ ಶೆಟ್ಟಿ, ಬಂಗಾರಪ್ಪ ಡಾ. ಸುಮಾ ಶೆಟ್ಟಿ, ರಾಘವೇಂದ್ರ
ಕವಾ೯ಲು ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳ ಕನಸುಗಳ ಪೆಟ್ಟಿಗೆಯಲ್ಲಿ ಬಂದ ವಸ್ತುಗಳನ್ನು ಮಕ್ಕಳಿಗೆ ನೀಡಲಾಯಿತು.
