ನ.22 - 24 : ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಕಾಲಭೈರವ ಜಯಂತಿ
Thumbnail
ಶಿರ್ವ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ಸ್ವಾಮಿ ದೇವಸ್ಥಾನ ಇಲ್ಲಿ ನವೆಂಬರ್ 22 ಶುಕ್ರವಾರದಿಂದ 24 ಆದಿತ್ಯವಾರದವರೆಗೆ ಶ್ರೀಕಾಲಭೈರವ ಜಯಂತಿಯ ಪ್ರಯುಕ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನವೆಂಬರ್ 22ನೇ ಶುಕ್ರವಾರ ಸಂಜೆ ಕಟಪಾಡಿಯಿಂದ ಕಾಲಭೈರವ ಸ್ವಾಮಿಗೆ ಬೆಳ್ಳಿ ಕವಚ ಹಾಗೂ ಹೊರಕಾಣಿಕೆ ಮೆರವಣಿಗೆಯೊಂದಿಗೆ ಸಾಗಿ ಬರಲಿದೆ. 23ನೇ ಶನಿವಾರ ಬೆಳಗ್ಗೆ ಗಣ ಹೋಮ, ಕಲಶಾಭಿಷೇಕ 10ಗಂಟೆಗೆ ಅಘೋರ ಅಖಾಡ್ ನ ಅಘೋರಿಗಳಿಂದ ಅಘೋರ ಭೈರವ ಹವನ್ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಬಳಿಕ ಮಹಾಅನ್ನಸಂತರ್ಪಣೆ ನಡೆಯಲಿದೆ ರಾತ್ರಿ 7ಗಂಟೆಗೆ ಅಷ್ಟಭೈರವ ಬಲಿ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.
21 Nov 2024, 10:53 AM
Category: Kaup
Tags: