ಉದ್ಯಾವರ ನದಿಯಲ್ಲಿ ಅಪರಿಚಿತ ಶವ ಪತ್ತೆ
Thumbnail
ಉದ್ಯಾವರ : ಇಲ್ಲಿನ ಕಾನಕೊಡ ಪಡುಕೆರೆ ಪಾಪನಾಷಿನಿ‌ ನದಿಯ ಪಶ್ಚಿಮ ಬದಿಯಲ್ಲಿ 35 ರಿಂದ 40 ವರ್ಷದ ಗಂಡಸಿನ ಮೃತದೇಹ ಪತ್ತೆ ಆಗಿದ್ದು, ಗುರುತು ಪತ್ತೆಗಾಗಿ ಕಾಪು ಪೊಲೀಸರು ಮನವಿ ಮಾಡಿದ್ದಾರೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಟೀಶರ್ಟ್, ಕಡು ನೀಲಿ ಬಣ್ಣದ ಬರ್ಮುಡಾ ಚಡ್ಡಿ, ಕೆಂಪು ಬಣ್ಣದ ಎಡಗೈಯಲ್ಲಿ ಕಪ್ಪು ರಬ್ಬರ್ ಬ್ಯಾಂಡ್ ಇದ್ದು, ಬಲಗೈಯಲ್ಲಿ ಕೆಂಪು ಬಣ್ಣದ ನೂಲು ಕಟ್ಟಿರುತ್ತಾನೆ. ಕೆಂಪು ಬಣ್ಣದ ಒಳ ಚಡ್ಡಿ ಧರಿಸಿರುತ್ತಾನೆ. ಮೃತದೇಹ ಸಾಗಿಸಲು ಸೂರಿ ಶೆಟ್ಟಿ ಮತ್ತು ನಾಗರಾಜ್ ಸಹಕರಿಸಿದ್ದರು.
21 Nov 2024, 07:12 PM
Category: Kaup
Tags: