ನ. 25 : ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮ
Thumbnail
ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಮಾಸಾಚರಣೆ "ತಿಂಗಳ ಸಡಗರ -2024" ಅಂಗವಾಗಿ ನವೆಂಬರ್ 25, ಸೋಮವಾರ ಸಂಜೆ ಗಂಟೆ 4ಕ್ಕೆ ನಿವೃತ್ತ ಶಿಕ್ಷಕರು, ಹಿರಿಯ ವಿದ್ವಾಂಸರಾದ ವೇದಮೂರ್ತಿ ಶ್ರೀ ವಿಠ್ಠಲ ಜೋಯಿಸರು ಸಾಂತೂರು ಇವರ ನಿವಾಸದಲ್ಲಿ "ಹಿರಿಯರೆಡೆಗೆ ಸಾಹಿತ್ಯದ ನಡಿಗೆ" ವಿಶೇಷ ಕಾರ್ಯಕ್ರಮದಡಿಯಲ್ಲಿ ಗೌರವಾರ್ಪಣೆ ಜರುಗಲಿದೆ. ಕಸಾಪ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಆಹ್ವಾನಿತ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಕಾಪು ತಾಲೂಕು ಕಸಾಪದ ಪ್ರಕಟನೆ ತಿಳಿಸಿದೆ.
24 Nov 2024, 08:46 AM
Category: Kaup
Tags: