ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ ಚಿತ್ರದ ಅಂಚೆ ಮೊಹರು ಅನಾವರಣ
ಉಡುಪಿ : ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಭಾರತೀಯ ಸಂವಿಧಾನದ ಅಮೃತೋತ್ಸವದ ಅಂಗವಾಗಿ ಕಟಪಾಡಿ ಮತ್ತು ಶಂಕರಪುರ ಉಪ ಅಂಚೆ ಕಚೇರಿಗಳಲ್ಲಿ ಕ್ರಮವಾಗಿ ತುಳುನಾಡಿನ ಜನಪ್ರಿಯ ವಸ್ತು ಗಳಾದ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆಗಳ ಶಾಶ್ವತ ಚಿತ್ರಾತ್ಮಕ ಅಂಚೆ ಮೊಹರನ್ನು ಅನಾವರಣಗೊಳಿಸಲಾಯಿತು.
ಸಮಾರಂಭದಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಸಹಿತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರು ತಾವು ರವಾನಿಸುವ ಕಾಗದ ಪತ್ರ ಮೇಲೆ ಈ ಮೊಹರನ್ನು ಮೇಲಿನ ಅಂಚೆ ಕಛೇರಿಗಳಲ್ಲಿ ಮುದ್ರಿಸಿ, ತುಳುನಾಡಿನ ಈ ಸಂಪತ್ತುಗಳ ಕಂಪನ್ನು ಎಲ್ಲೆಡೆ ಪಸರಿಸಬಹುದಾಗಿದೆ ಎಂದು ಅಂಚೆ ಪ್ರಕಟಣೆ ತಿಳಿಸಿದೆ.
