ಪಡುಬಿದ್ರಿ ಸಿಎ ಸೊಸೈಟಿಗೆ ನಬಾಡ್೯ ದ.ಕದ ಡಿ.ಡಿ.ಎಮ್ ಭೇಟಿ
ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ), ಪಡುಬಿದ್ರಿ ಇಲ್ಲಿಗೆ ನಬಾರ್ಡ್ನ ದಕ್ಷಿಣ ಕನ್ನಡ ಜಿಲ್ಲೆಯ ಡಿ.ಡಿ.ಎಮ್ ಸಂಗೀತ ಕರ್ತ ಭೇಟಿ ನೀಡಿ ಏಕರೂಪ ತಂತ್ರಾಂಶದ ಪ್ರಗತಿಯ ಬಗ್ಗೆ ಪರಿಶೀಲಿಸಿದರು.
ಸೊಸೈಟಿಯ ಅಧ್ಯಕ್ಷರಾದ ವೈ ಸುಧೀರ್ ಕುಮಾರ್, ಸೊಸೈಟಿಯಲ್ಲಿ ಲಭ್ಯವಿರುವ ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷರಾದ ಗುರುರಾಜ ಪೂಜಾರಿ, ನಿರ್ದೇಶಕ ವೃಂದ ಹಾಗೂ ಸಿಬ್ಬಂದಿ ವೃಂದ ಉಪಸ್ಥಿತರಿದ್ದರು.
