ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ನ್ಯಾಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಆಯ್ಕೆ
ಶಿರ್ವ : ಶ್ರೀ ಕೃಷ್ಣ ಜನ್ಮ ಭೂಮಿ ಮುಕ್ತಿ ನ್ಯಾಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಧರ್ಮ ಸಂಸದ್‌ನಲ್ಲಿ ಕರ್ನಾಟಕದ ಸಂತರ ಪರವಾಗಿ ಭಾಗವಹಿಸಿದ
ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸನಾತನ ಹಿಂದೂ ಧರ್ಮದ ಜಾಗೃತಿ ಹಾಗೂ ಸಂಘಟನಾ ಸೇವೆಗಳನ್ನು ಆಧಾರವಾಗಿ ಇಟ್ಟು ಮಥುರಾ ಬೃಂದಾವನದಲ್ಲಿ ನ.27ರಂದು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಖಚಿತ ಪತ್ರವನ್ನು ರಾಷ್ಟ್ರೀಯ ಅಧ್ಯಕ್ಷರಾದ ಮಹೇಂದರ್ ಪ್ರತಾಪ್ ಸಿಂಗ್ ರವರು ಕಳುಹಿಸಿರುತ್ತಾರೆ ಎಂದು ಮಠದ ಪ್ರಕಟನೆ ತಿಳಿಸಿದೆ.
