ಪಡುಕುತ್ಯಾರು, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ
Thumbnail
ಕಾಪು : ಪಡುಕುತ್ಯಾರು, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಪಂಚಮ ವಾರ್ಷಿಕ ಮಹಾಸಭೆಯು ಡಿ.1ರಂದು ದುರ್ಗಾ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟ್ಪಾಡಿಯ ಆಡಳಿತ ಮೊಕ್ತೇಸರ ಮುರಹರಿ ಕೆ ಆಚಾರ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ಉತ್ತರೋತರ ಅಭಿವೃದ್ದಿ ಹೊಂದಲಿ ಹಾಗೂ ಮಂದಿರದ ಜೀರ್ಣೋದ್ದಾರ ಕೆಲಸ ಶ್ರೀಘ್ರ ಪ್ರಾರಂಭವಾಗಲೀ ಎಂದು ಹಾರೈಸಿದರು. ಸನ್ಮಾನ : ಮುಖ್ಯ ಅತಿಥಿಯಾಗಿ ಆಗಮಿಸಿದ ಮುರಹರಿ ಕೆ ಆಚಾರ್ಯರವರನ್ನು, ಹಿರಿಯ ಸದಸ್ಯರಾದ ಸಂಜೀವ ಆಚಾರ್ಯ ದಂಪತಿಗಳನ್ನು ಮತ್ತು ಸ್ಥಳ ದಾನಿಗಳಾದ ಶಕುಂತಲ ಆರ್ ಆಚಾರ್ಯ, ಪಿ ಸಂಪತ್ ಕುಮಾರ್, ಪಿ ಮರಳಿಧರ ಆಚಾರ್ಯ, ಸುಪರ್ಣ ಡಿ. ಮತ್ತು ಸಂಘದ ಕಾರ್ಯಧ್ಯಕ್ಷರಾದ ಕಾಪು ಜಯರಾಮ ಆಚಾರ್ಯರವರನ್ನು ವಿಶೇಷ ಕಾರ್ಯಭಾರ ನಿರ್ವಹಣೆಗಾಗಿ ಸನ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ / ಬಹುಮಾನ ವಿತರಣೆ : ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮತ್ತು ಕಲಾ ನೈಪುಣ್ಯತೆ ಹೊಂದಿದ ಸಮಾಜದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟ್ಪಾಡಿ ದೇವಸ್ಥಾನದ ಮೊಕ್ತಶ್ವರರಾದ ಬಿಳಿಯಾರು ಗಣಪತಿ ಆಚಾರ್ಯ, ಡಿಂಡಿಬೆಟ್ಟು ಗಂಗಾಧರ ಆಚಾರ್ಯ, ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರು, ಮೊಕ್ತೆಶ್ವರರಾದ ಪ್ರಕಾಶ್ ಎಸ್ ಆಚಾರ್ಯ ಮತ್ತು ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷರಾದ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ, ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯಕುಮಾರ್, ಹೇಮಾವತಿ ಪಿ ಆಚಾರ್ಯ, ಪ್ರಸನ್ನ ಎಸ್ ಆಚಾರ್ಯರವರು ಉಪಸ್ಥಿತರಿದ್ದರು. ಸುರೇಶ್ ಆರ್ ಆಚಾರ್ಯ ಸ್ವಾಗತಿಸಿದರು. ಗೌರವಾಧ್ಯಕ್ಷರಾದ ಹರಿಶ್ಚಂದ್ರ ಎಚ್ ಆಚಾರ್ಯ ಪ್ರಸ್ತಾವನೆಗೈದರು. ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು. ಕೋಶಾಧಿಕಾರಿ ಗಂಗಾಧರ ಎಸ್ ಆಚಾರ್ಯರವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಲತಾ ಪ್ರಸಾದ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಜ್ಯೋತಿ ಪ್ರಕಾಶ ಆಚಾರ್ಯ ವಂದಿಸಿದರು.
Additional image
03 Dec 2024, 07:11 AM
Category: Kaup
Tags: