ಎಲ್ಲೂರಿನಲ್ಲಿ ಸಿಡಿಲಾಘಾತಕ್ಕೆ ದನ ಬಲಿ ; ವಿದ್ಯುತ್ ಉಪಕರಣಗಳಿಗೆ ಹಾನಿ
ಪಡುಬಿದ್ರಿ : ಫೆಂಗಲ್ ಚಂಡಮಾರುತದ ಪರಿಣಾಮ ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಸಿಡಿಲಿಗೆ ದನದ ಹಟ್ಟಿಗೆ ಸಿಡಿಲು ಬಡಿದು ದನವೊಂದು ಸಾವನ್ನಪ್ಪಿ, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿ ಉಂಟಾದ ಘಟನೆ ಕಾಪು ತಾಲೂಕಿನ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಎಲ್ಲೂರು ಜೋಗಿ ತೋಟದ ಶೇಖರ್ ಪೂಜಾರಿಯವರ ದನದ ಹಟ್ಟಿಗೆ ಸಿಡಿಲು ಬಡಿದಿದ್ದು ಇದರ ಪರಿಣಾಮ ದನ ಸಾವನ್ನಪ್ಪಿದೆ. ಹಾಲು ಕರೆಯುವ ದನ ಇದಾಗಿದ್ದು, ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ. ಜೊತೆಗೆ ಮನೆಯ ವಿದ್ಯುತ್ ಉಪಕರಣಗಳು ಸಿಡಿಲಿಗೆ ಹಾನಿಯಾಗಿದೆ.
ಎಲ್ಲೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗರು ಘಟನಾ ಸ್ಥಳಕ್ಕೆ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
