ಎಪ್ರಿಲ್ 11 ರಿಂದ ಕನ್ನಂಗಾರ್ ಉರೂಸ್ ; ಕರಪತ್ರ ಬಿಡುಗಡೆ
Thumbnail
ಪಡುಬಿದ್ರಿ : ಕನ್ನಂಗಾರ್ ಜುಮ್ಮಾ ಮಸೀದಿ ಅಧೀನದಲ್ಲಿರುವ ಮೂರು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಶೈಖುನಾ ಸಿರಜುದ್ದೀನ್ ವಲಿಯುಲ್ಲಾಹಿ ದರ್ಗಾ ಕನ್ನಂಗಾರ್ ಉರೂಸ್ 2025ರ ಎಪ್ರಿಲ್ 11ರಿಂದ 19ರವರೆಗೆ ನಡೆಯಲಿದ್ದು, ಆ ಪ್ರಯುಕ್ತ ಉರೂಸ್‌ನ ಕರಪತ್ರ ಬಿಡುಗಡೆಗೊಳಿಸಲಾಯಿತು. ಕನ್ನಂಗಾರ್ ಜುಮ್ಮಾ ಮಸೀದಿ ಮುರ‍್ರಿಸ್ ಅಶ್ರಫ್ ಸಖಾಫಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಕನ್ನಂಗಾರ್ ಜುಮಾ ಮಸೀದಿ ಮುಂಭಾಗದಲ್ಲಿ ಅಂತ್ಯವಿಶ್ರಮ ಹೊಂದಿರುವ ಶೈಖುನಾ ಸಿರಜುದ್ದೀನ್ ವಲಿಯುಲ್ಲಾಹಿ ದರ್ಗಾ ಇತಿಹಾಸ ಪ್ರಸಿದ್ಧವಾಗಿದ್ದು, ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆಯುವ ಉರೂಸ್ ಸಮಾರಂಭ ಈ ಭಾರಿ ನಡೆಯಲಿದ್ದು, ಈ ನಾಡಿನ ಸೌಹಾರ್ದಯುತವಾಗಿ ನಡೆಯುವ ಊರಿನ ಸಂಭ್ರಮವಾಗಿದೆ ಎಂದರು. ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ಮಾತನಾಡಿ, ಈ ಭಾರಿಯ ಉರೂಸ್ ಸಮಾರಂಭವು 2025ರ ಎಪ್ರಿಲ್ 11ರಿಂದ ನಡೆಯಲಿದ್ದು, ಉರೂಸ್‌ನಲ್ಲಿ ಸಾಮಾಜಿ, ಧಾರ್ಮಿಕ, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಕಾರ್ಯದರ್ಶಿ ಹಾಜಿ ಶೇಖ್ ಅಬ್ದುಲ್ಲಾ ಮಿನಾ, ಕೋಶಾಧಿಕಾರಿ ಅಬ್ದುಲ್ ಖಾದರ್ ಹಾಜಿ, ಜತೆಕಾರ್ಯದರ್ಶಿ ಅಬ್ದುಲ್ ಮಜೀದ್ ಮೆಹರಾಜ್, ಅಬ್ದುಲ್ ರಹ್ಮಾನ್ ಬಾವಾ, ಮುಹಮ್ಮದ್ ಕಬೀರ್, ಉರೂಸ್ ಸಮಿತಿಯ ಉಪಾಧ್ಯಕ್ಷ ಹನೀಫ್ ಹಾಜಿ, ಇಬ್ರಾಹಿಂ ಸನಾ, ಕಾರ್ಯದರ್ಶಿ ಸುಲೈಮಾನ್ ನೂರಿ, ಹಮೀದ್ ಚಾಯ್ಸ್, ಕೋಶಾಧಿಕಾರಿಯಾಗಿ ಕಬೀರ್ ಹಾಜಿ ಉಪಸ್ಥಿತರಿದ್ದರು.
05 Dec 2024, 09:38 PM
Category: Kaup
Tags: